ಸಂಸತ್ತಿನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಬಳಿ ಆಸ್ಟ್ರೇಲಿಯಾ ಪ್ರಧಾನಿ ಕ್ಷಮೆಯಾಚನೆ..!
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಅಪರಿಚಿತ ಸಹದ್ಯೋಗಿಯೋರ್ವ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಮಹಿಳೆಯೊಬ್ಬಳು ಆರೋಪಿಸಿದ್ದರು. ಇದೀಗ ಈ ಮಹಿಳೆ ಬಳಿ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮೊರಿಸನ್ ಕ್ಷಮಯಾಚಿಸಿದ್ದಾರೆ. ಅಲ್ದೇ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಬೆಲೆ ಏರಿಕೆ… ಮೊಬೈಲ್ ಬಳಕೆದಾರರಿಗೆ ಮತ್ತೊಂದು ಶಾಕ್ ಮೊಬೈಲ್ ರಿಚಾರ್ಜ್ ದರ ಏರಿಕೆ..!
ರಕ್ಷಣಾ ಸಚಿವ ಲಿಂಡಾ ರೆನೊಲ್ಡ್ಸ್ ಅವರ ಕಚೇರಿಯಲ್ಲಿ, ಮೊರಿಸನ್ ಅವರ ಲಿಬರಲ್ ಪಾರ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ 2019ರ ಮಾರ್ಚ್ ನಲ್ಲಿ ಬಲವಂತವಾಗಿ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಮಹಿಳೆ ದೂರಿದ್ದಾರೆ.
ವಾವ್…! ಕಂಪನಿ ಕರೆಗಳ ಕರೆಗಳಿಂದ ಮೊಬೈಲ್ ಬಳಕೆದಾರರಿಗೆ ಮುಕ್ತಿ..!
ಆಕೆಗೆ ಪೊಲೀಸ್ ದೂರು ನೀಡುವ ಕುರಿತಾಗಿ ತಿಳಿಸಲಾಗಿತ್ತು. ಆದರೇ, ಮಹಿಳೆ ದೂರು ಸಲ್ಲಿಸುವುದರ ವಿರುದ್ಧ ಆಕೆಗೆ ಒತ್ತಡ ಹೇರಿದ್ದರು ಎಂದು ರೆನೋಲ್ಡ್ಸ್ ಸ್ಪಷ್ಟ ಪಡಿಸಿದ್ದಾರೆ. ಇನ್ನು, ಸಂಸತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮಹಿಳೆಯರ ಬಗ್ಗೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಲಾಗುತ್ತದೆ ಎಂದು ಮೊರಿಸನ್ ಹೇಳಿದ್ದಾರೆ ಎನ್ನಲಾಗಿದೆ.