ಆಸೀಸ್ ಟೆಸ್ಟ್ : ಅಡಿಲೇಡ್ ನಲ್ಲಿ ಕಾಂಗರೂಗಳ ಬೇಟೆಯಾಡಿದ ಟೀಂ ಇಂಡಿಯಾ
ಅಡಿಲೇಡ್ : ರವಿಚಂದ್ರನ್ ಅಶ್ವಿನ್ ಸ್ಪೀನ್ ಜಾದು.. ಉಮೇಶ್ ಯಾದವ್, ಬೂಮ್ರಾ ಜೋರು.. ಆಸೀಸ್ ಬ್ಯಾಟ್ಸ್ ಮೆನ್ ಗಳ ಪೆವಿಲಿಯನ್ ಪರೇಡು..
ಒಟ್ಟಾರೆ ಅಡಿಲೇಡ್ ನಲ್ಲಿ ಎರಡನೇ ದಿನ ಟೀಂ ಇಂಡಿಯಾ ದರ್ಬಾರು.. ಇದು ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಹೈಲೆಟ್ಸ್..
ಹೌದು..! ಕೊಹ್ಲಿ ಹುಡುಗರ ಆರ್ಭಟಕ್ಕೆ ಆಸ್ಟ್ರೇಲಿಯಾ ತಂಡ ಪತರುಗುಟ್ಟಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 191 ರನ್ ಗಳಿಗೆ ಆಸೀಸ್ ಆಲೌಟ್ ಆಗಿದೆ. ಆ ಮೂಲಕ ಮೊದಲ ಟೆಸ್ಟ್ ಪಂದ್ಯದ ಮೇಲೆ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 244 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸಿಸ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಹೋರಾಟಕ್ಕೆ ತತ್ತರಿಸಿ ಹೋದ್ರು.
ಕೇವಲ 191 ರನ್ ಗಳಿಸುವಷ್ಟರಲ್ಲಿ ಕಾಂಗರೂಗಳು ಸುಸ್ತಾಗಿ ಹೋದರು. ಆಸಿಸ್ ಪರ ಲಾಬು ಶ್ಚಾಘ್ನೆ 47 ರನ್ ಮತ್ತು ನಾಯಕ ಟಿಮ್ ಪೈನ್ ಅಜೇಯ 73 ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟ್ಸ್ ಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರಲೇ ಇಲ್ಲ.
ಪರಿಣಾಮ ಆಸ್ಟ್ರೇಲಿಯಾ ತಂಡ ಕೇವಲ 191 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 53 ರನ್ ಗಳ ಹಿನ್ನಡೆ ಅನುಭವಿಸಿದೆ.
ಭಾರತದ ಆರ್ ಆಶ್ವಿನ್ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 3 ಮತ್ತು ಜಸ್ ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.
ಇತ್ತ 2ನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಗೆ 9 ರನ್ ಗಳಿಸಿದೆ. ಆ ಮೂಲಕ ಒಟ್ಟಾರೆ 62 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.
ಭಾರತದ ಪರ 2ನೇ ಇನ್ನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಕೇವಲ 4 ರನ್ ಗಳಿಸಿ ಪ್ಯಾಟ್ ಕಮಿನ್ಸ್ ವಿಕೆಟ್ ಒಪ್ಪಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel