Saturday, June 10, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home

ಅಂತರಂಗದ ಕಹಾನಿ – 1 : ಅಮಾವಾಸ್ಯೆ ರಾತ್ರಿ , ಒಂದು ಸತ್ಯಕಥೆ… ( Author Special )

ಅಂತರಂಗದ ಕಹಾನಿ - 1 : ಅಮಾವಾಸ್ಯೆ ರಾತ್ರಿ , ಒಂದು ಸತ್ಯಕಥೆ... ನಿಜ ಹೇಳೋದಾದ್ರೆ ಹೇಗೆ ಬರಿಬೇಕು.. ಅನ್ನೋದು ನನಗೆ ಇನ್ನೂ ಬರೋದಿಲ್ಲ.. ಆದ್ರೆ ಆಗಿದ್ ಆಗ್ಲಿ ತಪ್ಪಿದ್ರೆ ಬೈತಾರೆ , ತಿದ್ ತರೆ ಮುಂದೆ ಹೋಗ್ತಾ ಹೋಗ್ತಾ ಅವುಗಳಿಂದ ಕಲಿತು‌ ಸುಧಾರಿಸಿಕೊಳ್ತೇನೆ ಅನ್ನೋದನ್ನ ಅನುಸರಿಸುವಳು ನಾನು..

Namratha Rao by Namratha Rao
August 13, 2022
in Newsbeat, Saaksha Special, ಎಸ್ ಸ್ಪೆಷಲ್
saakshatv special stories horror
Share on FacebookShare on TwitterShare on WhatsappShare on Telegram

ನಿಜ ಹೇಳೋದಾದ್ರೆ ಹೇಗೆ ಬರಿಬೇಕು.. ಅನ್ನೋದು ನನಗೆ ಇನ್ನೂ ಬರೋದಿಲ್ಲ.. ಆದ್ರೆ ಆಗಿದ್ ಆಗ್ಲಿ ತಪ್ಪಿದ್ರೆ ಬೈತಾರೆ , ತಿದ್ ತರೆ ಮುಂದೆ ಹೋಗ್ತಾ ಹೋಗ್ತಾ ಅವುಗಳಿಂದ ಕಲಿತು‌ ಸುಧಾರಿಸಿಕೊಳ್ತೇನೆ ಅನ್ನೋದನ್ನ ಅನುಸರಿಸುವವಳು ನಾನು..

ಸತ್ಯ ಕಥೆ ನನ್ನ ಚಿಕ್ಕಮ್ಮನ ಮಗ ನನಗೆ ಹೇಳಿದ ಅವನದ ಭಯಾನಕ ಅನುಭವದ ಕಥೆ.. ನನ್ನ ತಮ್ಮನ ಕಥೆ ಹೇಳ್ತೇನೆ..

Related posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

June 8, 2023
ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023

ಎಸ್ ಎಸ್ ಎಲ್ ಪರೀಕ್ಷೆ ಸಮಯ… ಪರೀಕ್ಷೆಗೆ ೧೫ ದಿನ‌ ಉಳಿದಿತ್ತು.. ಖಾಸಗಿ ಶಾಲೆ ಬೇರೆ ಕೇಳಬೇಕಾ..

ರಾತ್ರಿ ೧೦ ಆದ್ರೂ ಮಕ್ಕಳನ್ನ ಮನೆಗ್ ಬಿಡಂಗಿಲ್ಲ.. ಹುಡುಗಿಯರನ್ನ , ದೂರದಲ್ಲಿದ್ದವರನ್ನೇಲ್ಲ ೯ ಗಂಟೆಗೆ ಕಳುಹಿಸಿಬಿಟ್ಟಿದ್ರು.. ಅಲ್ಲೇ ಅಹತ್ತಿರದಲ್ಲಿದ್ದ ಹುಡುಗರ ಕಥೆ ಪಾಪ…  ಇಲ್ಲೇ ಇರಪ್ಪಾ ಇನ್ನೊಂದ್ ೩ ಹಳೆ ಪ್ರಶ್ನೆ‌ ಪತ್ರಿಕೆ  ಸಾಲ್ವ್ ಮಾಡ್ ಹೋಗು ನಾನು ಮನೇಗ್ ಹೋಗಲ್ಲ ಅಂತ ಕೂತಿದ್ದ ಮೇಸ್ಟ್ರು ಹಂಗಂದ್ ೧೦ ನಿಮಿಷದಲ್ಲೇ ಹೊರಡ್ರಿ ಮನೆಗೆ ಅಂತ ಆಕಳಿಸುತ್ತಾ ಎದ್ದರು.. ಅಲ್ಲಿದ್ದ ೭ ಮಂದಿ ಹುಡುಗರು ಫುಲ್ ಖುಷ್ ಆಗ್ತಾ ಬ್ಯಾಗಿನೊಳಗೆ ಬುಕ್ ಪೆನ್ , ಪೇಪರ್ ಗಳನ್ನೆಲ್ಲಾ ತುಂಬಿಕೊಂಡ್ರು.. ಕೊನೆದಾಗಿ ಅಲ್ಲೇ ಹೊರಗಿಡಲಾಗಿದ್ದ ಟೇಬಲ್ ಗಳನ್ನೆಲ್ಲಾ ಒಳಗಡೆ ಇಡ್ರಿ‌ ಅಂತ ಮೇಸ್ಟ್ರು ಕಡೆಗೂ ಒಂದ್ ಫಿಟಿಂಗ್ ಇಟ್ಟೇ ಅವರ ಜೊತೆ ಅವರ ಮನೆ‌ ಬಳಿ‌ ಇದ್ದ ಇಬ್ಬರು ಹುಡುಗರನ್ನ ಕರೆದುಕೊಂಡು ಹೋದ್ರು..

ಮೇಸ್ಟ್ರನ್ನ ಬೈದುಕೊಂಡೇ ಐವರೂ ಕೂಡಿ ಟೇಬಲ್ ಗಳನ್ಬ ಒಳಗಡೆ ಒಟ್ ಡೋರ್ ಲಾಕ್ ಮಾಡಿದ್ರು.. ಅದ್ರಲ್ಲೀ ಮೂವರು ಒಂದ್ ದಾರಿಲಿ ಹೋದ್ರೆ ಮತ್ತಿಬ್ಬರ ದಾರಿ ಬೇರೆ ಬೇರೆ ಇತ್ತು..

ಮೂವರು ಸರೀ ಕಣ್ರೋ ಬಾಯ್ ಅಂತ ಆ ಮೂವರೂ ಹೊರಟರು.. ಉಳಿದವರು ಈ ಇಬ್ರು.. ಒಬ್ಬ ಹೇಳ್ತಾನೆ.. ಲೋ ನಾನು ಟಾಯ್ಲೆಟ್ ಹೋಗಬೇಕು ಅಂತ.. ಮತ್ತೊಬ್ಬ ಸರಿ ನಡೀ ನಾನು ಬರುತ್ತೇನೆ ಅಂತ ಇಬ್ಬರೂ ಸೌಚಾಲಯದ ಕಡೆ ಹೋಗ್ತಾ ಸುತ್ತಲೂ ಹಾಗೇ ಸುಮ್ಮನೆ ನೋಡ್ತಾರೆ.. ಕತ್ತಲ ಕೌಚು , ಅವರ ಬಳಿ ಇದ್ದ ಸಣ್ಷ ಟಾರ್ಚ್ ನಲ್ಲಿ ಸರಿ‌ಬೆಳಕಿಲ್ಲ.. ಅದನ್ನ ಬಿಟ್ರೆ ಮತ್ಯಾವ ಲೈಟ್ ಇಲ್ಲ.. ಎಲ್ಲೋ ಸ್ಕೂಲ್ ಬ್ಯುಲ್ಡಿಂಗ್ ನ‌ಮೂಲೆಲಿ ಒಂದು ಚಿಕ್ಕ ಲೈಟ್.. ಸುತ್ತಲೂ ಒಮ್ಮೆ  ನೋಡ್ತಾರೆ ಕಗ್ಗತ್ತಲಲ್ಲಿ ಸುತ್ಯಲೂ ಗಿಡ ಮರಗಳಿಂದ ಆ ಶಾಲೆ ಯಾವುದೇ ಭೂತ ಬಂಗಲೆಗಿಂತ ಕಡಿಮೆಯಲ್ಲ ಅನ್ನುವಂತೆ ಕಾಣ್ತಿರುತ್ತೆ.

ಇಬ್ಬರೂ ಇದ್ದಕ್ಕಿದ್ದಂತೆ ನಿಧಾನವಾಗಿ ಒಂದೊಂದೇ ಹೆಜ್ಜೆ‌ ಇಡುತ್ತಾ ಭಯದಲ್ಲಿ ನಡೆಯುತ್ತಾ ಲೋ ಮಗ ಅಂದ್ರೆ , ಮತ್ತೊಬ್ಬ ಏನೋ.. ಭಯ ಆಗ್ತಿದೆ ಕಣೋ ಅಂತಾನೆ.. ಮತ್ತೊಬ್ಬ ನನಗೂ ಕಣೋ.. ಯಾಕಿಷ್ಟು ಭಯ… ಆಗ್ತಿದೆ ಕತ್ತಲು ತುಂಬಾ ಇದೆ ಅಲ್ವಾ.. ಹೂ.. ಚಂದ್ರನೂ ಕಾಣಿಸ್ತಿಲ್ಲ ಅಂತ ಒಬ್ಬ ಅಂದ್ರೆ , ಮತ್ತೊಬ್ಬ ಹೇಳ್ತಾನೆ ಅಯ್ಯೋ ಮಗ ಅಮ್ಮ ಹೇಳಿದ್ರು ಇವತ್ತು‌ಅಮಾವಾಸ್ಯೆ ಹುಷಾರು ಅಂತ.. ಒನ್ನೊಬ್ಬ ಭಯದಲ್ಲಿ ತಡಬಡಾಯಿಸುತ್ತಾ… ಏಏ..ಏ..ಏನಂದೆ ಅಮವಾಸ್ಯೆನ … ಇಬ್ನೊಬ್ಬ‌ ಹೂ ಅನ್ನೋದಕ್ಕೂ ನಾಯಿಗಳು ಔಔಔಔಔಔಔ ಅಂತ ಗೋಳಾಡೋದಕ್ಕೆ ಒಂದೇ ಆಗಿಬಿಡುತ್ತೆ..

ಅಷ್ಟೇ ಭಯದಲ್ಲಿ ಇಬ್ರೂ ಯಾವ್ ಟಾಲ್ಲೆಟ್ ಕೂಡ ಇಲ್ಲ ಏನಿಲ್ಲ ಮಗ‌ಮೊದ್ಲು ಮನೆ ಸೇರೋಣ ಬಂದಷ್ಟೆ ಸ್ಪೀಡ್ ನಲ್ಲಿ ಯೂ ಟರ್ನ್ ಓಡೋಕೆ ಶುರು‌ಮಾಡ್ ತರೆ.. ಸಡನ್ ಆಗಿ ಗಿಜಿಗಿಜಿ ಶಬ್ಧ , ಎಲ್ಲಿಂದಲೋ ಪಕ್ಷಿಗಳ ಚೀರಾಟ, ಇದೆಲ್ಲ ಸಾಲದಕ್ಕೆ ಜೋರಾದ ಗಾಳಿ ಒಮ್ಮೆಲೇ ಎಲ್ಲವೂ ಅವರಿಬ್ಬರು ಚಳಿಯಲ್ಲಿ ಬೆವರುವಂತೆ ಮಾಡಲು ಸಾಕಾಗಿತ್ತು..

horror

ಇಬ್ಬರೂ ಓಡ್ತಿದ್ದವರು ಹಾಗೆ ಗೇಟ್ ಇಂದ‌ ಸ್ವಲ್ಪ‌ದೂರದಲ್ಲೇ ನಿಂತು‌ಬಿಟ್ಟರು.. ಕಾಲುಗಳಲ್ಲಿ ಶಕ್ತಿ ಇರಲಿಲ್ಲ.. ಮನಸಲ್ಲಿ ಧೈರ್ಯ ಇರಲಿಲ್ಲ.. ಇಬ್ಬರ ಗಂಟಲೂ ಭಯದಲ್ಲಿ ಒಙಗಿತ್ತು.. ಇಬ್ಬರೂ ಭಯದಲ್ಲಿ ಬೆವರುತ್ತಾ ಒಮ್ಮೆ ಸುತ್ತಲೂ ನೋಡಿದ್ರು.. ಕಾರ್ಕೋಟಕ ಕತ್ತಲೆ.. ಗೌಚು.. ಇವರಿಬ್ಬರ ಬಳಿ ಇದ್ದದ್ದು ಚಿಕ್ಕದೊಂದು ಲೈಟ್.. ಒಬ್ಬ ಹೇಳ್ತಾನೆ ಮಗ ಇಬ್ರೂ ಒಟ್ಟಿಗೆ ಓಡೋಙ ಮೇನ್ ರೋಡ್ ಗೆ ಹೋದ್ರೆ ಜನ ಇರುತ್ತಾರೆ ಭಯ ಆಗಲ್ಲ ಅಂತ.. ಇನ್ನಬ್ಬ ಸರಿ‌ ಮಗ ಅಂತ ಶೂ ಲೇಸ್ ಗಳನ್ನ ಇಬ್ರೂ ಸರಿಯಾಗಿ ಕಟ್ಟಿಕೊಳ್ತಾ ಒಂದು ದೀರ್ಘವಾದ ಉಸಿರು ತೆಗೆದುಕೊಳ್ತಾ ಇನ್ನೇನು‌ ಓಡಬೇಕು..

ಅಷ್ಟರಲ್ಲಿ ಅವರ ಕಾಲುಗಳನ್ನ ಯಾರೋ ಹಿಂಬದಿಯಿಂದ ಹಿಡಿದು‌ಎಳೆದಂತೆ‌ ಭಾಸವಾಗಿಬಿಡುತ್ತೆ.. ಇಬ್ಬರೂ ಒಟ್ಟಾಗಿ ಭಯದಿಂದ ಬೆಸ್ತು ಬೇಳ್ತಾ ಕುರುಚಾಡ್ತಾರೆ.‌

ಅಷ್ಟ್ರಲ್ಲಿ ಅಲ್ಲೇ ಅವರ ಮುಂದೆ ಇದ್ದ ಉಣಸೆ ಮರದ ಮೇಲೆ ದುರಾದೃಷ್ಟಕ್ಕೆ ಅವರ ದೃಷ್ಟಿ ಹೋಗುತ್ತೆ.. ಅದನ್ನ ನೋಡಿ ಒಬ್ಬ  ಮಾತು ಬರದೇ ಪಕ್ಕದಲ್ಲಿದ್ದವನ ಬಡಿದು ಮೇಲೆ‌ನೋಡೋಕೆ ಹೇಳ್ತಾನೆ.. ಅವನ ಭಯ ನೋಡಿ ಮತ್ತಿಬ್ಬ ಮೇಲೆ ನೋಡಿದ್ರೆ..  ಅಲ್ಲಿ ಬಿಳಿ ಸೀರೆಯುಟ್ಟು ಉದ್ದ‌ ಕೂದಲನ್ನ ಮುಂದೆ ಬಿಟ್ಟು ತಲೆ ಮುಚ್ಚಿಕೊಂಡಿದ್ದ ಒಬ್ಬ ಹೆಂಗಸು‌ಕಾಣಿಸುತ್ತಾಳೆ.. ಅಷ್ಟೇ ಇಬ್ಬರಿಗೆ ಇದ್ದ ಅಲ್ಪ ಸ್ವಲ್ಪ ಧೈರ್ಯ ಸತ್ತು ಹೋಗುತ್ತೆ.. ಇಬ್ಬರೂ ಭಯದಲ್ಲಿ ನೋಡಿ ಮುಂದೆ ಗೇಟ್ ಗೆ ಹೋಗೋ ಧೈರ್ಯ ಇಲ್ಲದೇ‌ ಹಿಂಬದಿ ಗೇಟ್ ಬಳಿ ಓಡೋಡಿ ಬಂದೋರೆ ಅದ್ ಹೇಗೆ ಅಷ್ಟೆತ್ತರದ ಕಾಂಪೋಂಡ್ ಹತ್ತುದ್ರೋ , ಅದ್ಯಾವಾಗ ಶಾಲೆಯಿಂದ ಆಚೆ‌ ಹೋದ್ರೋ ಓಡ್ತಾ ಓಡ್ತಾ ಅದ್ಯಾವಾಗ ಅವರಿಬ್ರೂ ಮನೆಗಳಿಗೆ ಹೋದ್ರೋ ಒಂದು ಗೊತ್ತಾಗಿರಲ್ಲ..

ಇಬ್ಬರಿಗೂ ಮನೆಗೆ ಹೋದೋರೆ ಮೂರ್ಚೆ ಬಿದ್ದಿರುತ್ತಾರೆ.. ಕೈಕಾಲುಗಳೂ ಆ ಇಬ್ಬರೂ ಹುಡುಗರದ್ದೂ ತರಚಿಹೋಗಿರುತ್ತೆ.. ಬೆವರು ಸುರಿಯುತ್ತಿರುತ್ತೆ.. ಆದ್ರೂ ಚಳಿಜ್ವರ ಬಂದಿರುತ್ತೆ.. ಇಬ್ಬರ ಕೈನಲ್ಲೂ ಬ್ಯಾಗ್ ಗಳಿರಲ್ಲ.. ಮಾತಾಡೋ ಪರಿಸ್ಥಿತಿಯಲ್ಲಿ ಅವರೂ ಇರಲ್ಲ..

ಮನೆಯವರೋ ಗಾಬರಿಯಿಂದ ತಾಯತ‌ ಕಟ್ಟೋದು.. ಮನೆಲಿದ್ದ ದೇವರ ಡಾಲರ್ ಗಳನ್ನ ಕತ್ತಿಗೆ‌ ಹಾಕೋದು ಕುಂಕುಮ ಇಟ್ಟು ಕಾಲಿಗೆ ಬೆಳ್ಳುಲ್ಲಿ ತಿಕ್ಕಿ.. ದೇವರ ಭಜನೆ ಹಾಕೋದು ಆ ಇಡೀ ರಾತ್ರಿ ಇದೇ.. ಬೆಳಿಗ್ಗೆ ಇಬ್ಬರ ಮನೆಯವರೂ ಗಾಬರಿಯಿಂದ ಆ ಹುಡುಗರನ್ನ ಕೇಳಿದ್ರು.. ಇಂಚಿಂಚೂ ಬಿಡದೇ ಅವರು ಎಲ್ಲಾ ಹೇಳಿಬಿಟ್ಟರು.. ಮನೆಯವರೂ ಒಮ್ಮೆಲೆ ಗಾಬರಿಗೊಂಡು ಭೂತದ ಶಾಲೆಯಲ್ಲಿ ಮಕ್ಕಳೂ ಓದುವುದು ಹೇಗೆ ಪ್ರಿನ್ಸಿಪಲ್ ಹತ್ರ ಮಾತಾಡಿ ಉಪಾಉ ಹುಡುಕಲೇ ಬೇಕಂಥ ಇಬ್ರೂ ಮನೆಯವರು ಆ ಹುಡುಗರನ್ನ‌ಕರೆದುಕೊಂಡು ಶಾಲೆ ಬಳಿ ಬಂದರು.. ಪ್ರಿನ್ಸಿಪಲ್ ಬಳಿ ಸೀದಾ ಹೋಗಿ ಎಲ್ಲಾ ವಿಚಾರ ಹೇಳೇ ಬಿಟ್ಟರು..

ಪ್ರಿನ್ಸಿಪಲ್ ಇದನ್ನೆಲ್ಲಾ ನಂಬುವಂತವರಲ್ಲ.. ಹಾಗಾಗಿ ಹೇ ಇದೆಲ್ಲಾ ಅವರ‌ ಭ್ರಮೆ ಅಷ್ಟೇ ಟಂತದಿಲ್ಲಾ ಅಂತ ಎಷ್ಟೇ ಹೇಳಿದಗರು ಮಕ್ಕಳ ಮನೆಯವರು ಮಾತು ಕೇಳಲು ಸುತಾರಾಮ್ ತಯಾರಿರಲಿಲ್ಲ.. ಸತಿ ಅದೇನು‌ನೋಡಿಯೇ ಬಿಡೋಣ ಅಂತ ಪ್ರಿನ್ಸಿಪಲ್ ಅವರೆಲ್ಲರನ್ನ ಕರೆದು ಆ ಹುಣಸೆ ಮರದ ಬಳಿ ಹೋದ್ರು.. ಅಲ್ಲಿ ಹೋಗಿ ಮರದ ಮೇಲೆ ಇದ್ದ್ದನ್ನ ನೋಡಿ ಎಲ್ಲರೂ ಶಾಕ್ ಆಗಿದ್ರೂ.. ಅಲ್ಲಿದ್ದ್ದೂ ಯಾವುದೋ ಆತ್ಮವಲ್ಲ.. ಬದಲಾಗಿ ದೊಡ್ಡ ಬಿಳಿ ಬಣ್ಣದ ಕವರ್… ಆ ಕವರ್ ಕೆಳಗೆ ಕಪ್ಪಗಾಗಿದ್ದ ಹುಙಸೆ‌ಮರದ ಗೊಂಚಲು.. ಕತ್ತಲ್ಲಿ , ಅದ್ರಲ್ಲೂ ಭಯದಲ್ಲಿದ್ದ ಅವರಿಗೆ ಅದು ದೆವ್ಬದಂತೆ ಅನಿಸಿದೆ..

ಅಲ್ಲಿಗೆ‌ ಎಲ್ರಿಗೂ ಅಲ್ಲೇನ್ ನಡೀತು ಅನ್ನೋದು ಗೊತ್ತಾಗಿ ಹೋಯ್ತು.. ಎಲ್ರೂ ತಾವು ಅಂದುಕೊಂಡಿದ್ದು ತಪ್ಪು.. ದೆವ್ವ ಇಲ್ಲ ಭೂತ‌ ಇಲ್ಲ ಅಂತ ಮಾತನಾಡುತ್ತಾ ಆದ್ರೂ ಮಕ್ಕಳನ್ನ ಎಲಗಲರನ್ನೂ ೭ಗಂಟೆಗೆ ಮನೆಗೆ ಕಳುಹಿಸಬೇಕಂತ ಪ್ರಿನ್ಸಿಪಲ್ ಆರ್ಡರ್ ಆಯ್ತು.. ಎಲ್ಲರೂ ಹೋದರು..

ಆದ್ರೆ ಆ ಹುಡಗರಲ್ಲಿ ಒಂದು ಪ್ರಶ್ನೆ ಇನ್ನೂ‌ಕಾಡುತ್ತಾ ಇತ್ತು..  ಅಲ್ಲಿ ಕಳೆದ ರಾತ್ರಿ ಅವರ ಕಾಲುಗಳನ್ನ ನಿಜವಾಗಲೂ ಯಾರೋ ಎಳೆದಿದ್ದು ಸುಳ್ಳಲ್ಲಾ.. ಒಬ್ರಿಗೆ ಮಾತ್ರ ಅಲ್ಲ ಇಬ್ರಿಗೂ ಒಂದೇ ಸಲ ಆ ಅನುಭವ ಆಗಿತ್ತು.. ಹಾಗಾದ್ರೆ ಅದೇನು.. ಈ ಪ್ರಶ್ನೆ ಇಂದಿಗೂ ತಮ್ಮನನ್ನ ಕಾಡ್ತಿದೆ… ಅವನ‌ ಕಥೆ ಕೇಳಿ ನನ್ನಲ್ಲೂ ಈ ಪ್ರಶ್ನೆ ಇದೆ..? ನಿಮಗೆ ಈ‌ಬಗ್ಗೆ‌ ಏನ್ ಅನ್ನಿಸುತ್ತೆ..

 

–  ನಿಹಾರಿಕಾ  ರಾವ್ –

Tags: Author specialhorror storiestrue experiences
ShareTweetSendShare
Join us on:

Related Posts

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

ಮೆಟಾ: ಬ್ಲೂ ಟಿಕ್ ಬೆಲೆ ತಿಂಗಳಿಗೆ 699 ರೂ.

by Honnappa Lakkammanavar
June 8, 2023
0

ಇನ್ನು ಮುಂದೆ ಯಾರು ಬೇಕಾದರೂ ಮೆಟಾ ಬ್ಲೂ ಟಿಕ್ ಪಡೆಯಬಹುದು. ಮೆಟಾ ವೆರಿಫೈಡ್ ಸೇವೆಯು ಭಾರತದಲ್ಲಿ Instagram ಅಥವಾ Facebook ನಲ್ಲಿ ಖರೀದಿಸಲು ಲಭ್ಯವಿದೆ ಎಂದು ಕಂಪನಿ...

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

ವಾಟ್ಸ್ ಆಪ್ ಬಳಕೆದಾರರಿಗೆ ಗುಡ್ ನ್ಯೂಸ್

by Honnappa Lakkammanavar
April 26, 2023
0

ಹೆಚ್ಚು ಜನಪ್ರಿಯ ಹಾಗೂ ಹೆಚ್ಚಿನ ಗ್ರಾಹಕರನ್ನು ಹೊಂದಿರುವ ವಾಟ್ಸ್‌ ಆಪ್‌ ತನ್ನ ಬಳಕೆದಾರರ ಬಹುಬೇಡಿಕೆಯ ಫೀಚರ್‌ ಪರಿಚಯಿಸಿದೆ. ಅದರಂತೆ, ಇನ್ನು ಮುಂದೆ ಬಳಕೆದಾರರು ಕೇವಲ ಒಂದು ಮೊಬೈಲ್‌...

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

ವಾಟ್ಸಾಪ್‌: ಭದ್ರತೆಗೆ 3 ಹೊಸ ಫೀಚರ್‌

by Honnappa Lakkammanavar
April 17, 2023
0

ವಾಟ್ಸಾಪ್‌ ಬಳಕೆದಾರರ ಸುರಕ್ಷತೆಯ ಹಿನ್ನೆಲೆಯಲ್ಲಿ ವಾಟ್ಸಾಪ್ ಕಂಪನಿಯು 3 ಹೊಸ ಫೀಚರ್‌ ಬಿಡುಗಡೆ ಮಾಡಿದೆ. ಇದು ಮೊಬೈಲ್‌ ಸಾಮಾಜಿಕ ತಾಣವನ್ನು ಮತ್ತಷ್ಟು ಸುರಕ್ಷಿತ ಮಾಡಲಿದೆ ಎಂದು ಕಂಪನಿ...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

6200+ ಸ್ಕ್ರೀನ್ಗಳಲ್ಲಿ ಬರಲಿದೆ ಆದಿಪುರುಷ್

June 10, 2023
ನಾಳೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ

ನಾಳೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ

June 10, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram