ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನ ಕೊಲೆ mandya saaksha tv
ಮಂಡ್ಯ: ಮಾರಕಾಸ್ತ್ರಗಳಿಂದ ಕೊಚ್ಚಿ ಆಟೋ ಚಾಲಕನನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.
30 ವರ್ಷದ ನಾಸಿರ್ ಅಹಮದ್ ಕೊಲೆಯಾದ ಆಟೋ ಚಾಲಕನಾಗಿದ್ದು, ಆಲಂಬಾಡಿಕಾವಲು ದರ್ಗಾದ ಸಮೀಪ ಈ ಘಟನೆ ನಡದಿದೆ. ಇನ್ನು ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಖಾಕಿಪಡೆ ಹಂತಕರ ಸೆರೆಗೆ ಬಲೆ ಬೀಸಿದೆ.