ಎಂ.ಇ.ಎಸ್ ಸಂಘಟನೆ ನಿಷೇಧಿಸುವಂತೆ ಆಟೋ ಚಾಲಕರ ಒತ್ತಾಯ
ಬೆಳಗಾವಿ: ಬೆಳಗಾವಿಯಲ್ಲಿ ಕೆಲದಿನಗಳ ಹಿಂದೆ ಎಂ.ಇ.ಎಸ್ ಸಂಘಟನೆ ಕನ್ನಡ ಬಾವುಟ ಸುಟ್ಟು ರಾಯಣ್ಣ ಹಾಗೂ ಬಸವಣ್ಣರ ಪ್ರತಿಮೆ ಭಗ್ನಗೊಳಿಸಿ ಪುಂಡಾಟ ಮೆರೆದಿದ್ದರು. ಇದರ ವಿರುದ್ಧವಾಗಿ ನಗರದಲ್ಲಿ ಆಟೋ ಚಾಲಕರು ಧರಣಿ ನಡೆಸಿದರು.
ಎಂ.ಇ.ಎಸ್ ಸಂಘಟನೆಯನ್ನು ನಿಷೇಧಿಸಿ ಕೃತ್ಯದಲ್ಲಿ ಭಾಗಿಯಾಗಿಯಾದ ಕಾಯ೯ಕತ೯ರನ್ನ ಬ೦ದಿಸಬೇಕು. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಎಂ.ಇ.ಎಸ್ ಕಾಯ೯ಕತ೯ರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಎಂದು ಕೊಳ್ಳೇಗಾಲ ಟೌನ್ ಆಟೋ ಚಾಲಕರು ಹಾಗೂ ಮಾಲೀಕರ ಸಂಘ ಪ್ರತಿಭಟನೆ ನಡೆಸಿದರು.