ಸಾವು ಬದುಕಿನ ಬಗ್ಗೆ ಮಾತನಾಡಿದ ಪುಷ್ಕರ್ ಮಲ್ಲಿಕಾರ್ಜುನಯ್ಯ..!! ‘ಅವತಾರ ಪುರುಷನ ಬಗ್ಗೆ ಹೀಗ್ಯಾಕ್ ಹೇಳಿದ್ರು..??
ಬೆಂಗಳೂರು : ಕನ್ನಡ ಸಿನಿಮಾರಂಗಕ್ಕೆ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನ ಕೊಟ್ಟಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು. ಹಂಬಲ್ ಪೊಲಿಟೀಷನ್ ನಾಗರಾಜ್, ಅವನೇ ಶ್ರೀಮನ್ ನಾರಾಯಣ, ಭೀಮಸೇನ ನಳಮಹರಾಜ್ ಅಂತಹ ಒಳ್ಳೆ , ಕಂಟೆಂಟ್ ಬೇಸಡ್ ಸಿನಿಮಾಗಳನ್ನ ನೀಡಿರುವ ಮಲ್ಲಿಕಾರ್ಜುನಯ್ಯ ಅವರು ಇದೀಗ ಸಾವು ಬದುಕಿನ ಬಗ್ಗೆ ಮಾತನಾಡಿ ಟ್ವೀಟ್ ಮಾಡಿದ್ಧಾರೆ..
ಅವರ ನಿರ್ಮಾಣದ ಮುಂದಿನ ಸಿನಿಮಾ ‘ಅವತಾರಪುರುಷ’.. ಶರಣ್ , ಆಶೀಕಾ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾ ಕಾಮಿಡಿ ಎಂಟರ್ ಟೈನರ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.. ಮೇ 06 ಕ್ಕೆ ಈ ಸಿನಿಮಾ ರಿಲೀಸ್ ಆಗ್ತಿದೆ.. ಈ ಸಿನಿಮಾಗೆ ನಿರ್ದೇಶಕ ಸಿಂಪಲ್ ಸುನಿ ಆಕ್ಷನ್ ಕಟ್ ಹೇಳಿದ್ದಾರೆ..
ಮಲ್ಲಿಕಾರ್ಜುನಯ್ಯ ಅವರು ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲು ಟ್ವೀಟ್ ಮಾಡಿದ್ದು , ‘ನನ್ನ ಸಾವು- ಬದುಕಿನ ಮಧ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ, #ಅವತಾರಪುರುಷ. Releasing on May 6th 2022. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ ಎಂದು ಬರೆದುಕೊಂಡಿದ್ದಾರೆ. ಅವರ ಈ ಟ್ವಿಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.. ಆದ್ರೆ ನೆಟ್ಟಿಗರಂತೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಭಾರೀ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.. ಕಮೆಂಟ್ ಗಳನ್ನ ಮಾಡುತ್ತಾ ನಾವು ನಿಮ್ಮಂದಿಗೆ ಇದ್ದೀವೆ.. ಸಿನಿಮಾ ಹಿಟ್ ಆಗುತ್ತದೆ ಎಂದೆಲ್ಲಾ ಹರಸುತ್ತಿದ್ದಾರೆ.
ನನ್ನ ಸಾವು-ಬದುಕಿನ ಮದ್ಯೆ ಸಣ್ಣ ಎಳೆಯಂತೆ ಇರುವ ನನ್ನ ಕೊನೆಯ ಆಸರೆ #ಅವತಾರಪುರುಷ Releasing on May 6th 2022 .. ನಿಮ್ಮ ಪ್ರಾರ್ಥನೆ ಹಾಗು ಬೆಂಬಲ ನನ್ನ ಜೊತೆಯಿರಲಿ 🙏🕉 pic.twitter.com/32poxScar5
— Pushkarah Mallikarjunaiah (@Pushkara_M) March 11, 2022