ಬೆಂಗಳೂರು : ಆಯುವೇದ ತಜ್ಞ ಡಾ.ಗಿರಿಧರ ಕಜೆ ಅವರಿಗೆ ಕೊರೊನಾ ವೈರಸ್ ಸೋಂಕಿ ಔಷಧಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಎಂಸಿಆರ್ ಐ ನೋಟಿಸ್ ನೀಡಿದೆ. ಆಯುರ್ವೇದ ಔಷಧ ಇನ್ನು ಕ್ಲಿನಿಕಲ್ ಟ್ರಯಲ್ ನ ಪ್ರಾಥಮಿಕ ಹಂತದಲ್ಲಿದ್ದರೂ, ಗಿರಿಧರ್ ಅವರು ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡುತ್ತಿರುವುದಕ್ಕೆ ಬಿಎಂಸಿಆರ್ ಐ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ನೀಡಿದೆ.
ಇದೊಂದು ಸೂಕ್ಷ್ಮ ಸಂದರ್ಭ. ಇಂತಹ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮುನ್ನ ಸೂಕ್ತ ಆಡಳಿತ ಮಂಡಳಿಯಿಂದ ಅನುಮತಿ ಪಡೆದಿರಬೇಕೆಂಬುದು ನಿಮಗೆ ತಿಳಿದಿದೆ. ಆದರೂ ನೀವು ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ಈ ಕುರಿತು ತಕ್ಷಣ ಸ್ಪಷ್ಟೀಕರಣ ನೀಡಲು ಬಿಎಂಸಿಆರ್ ಐ ಕೇಳಿದೆ. ಹಾಗೇ ಒಂದು ವೇಳೆ ನೋಟಿಸ್ ಗೆ ಉತ್ತರಿಸದಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬಿಎಂಆರ್ ಸಿಐ ಎಚ್ಚರಿಸಿದೆ.