Azadi Ka Amrit Mahotsav | ತುಮಕೂರಿನಲ್ಲಿ ದೇಶಕ್ಕಾಗಿ ಮಹಾ ನಡಿಗೆ
ತುಮಕೂರು : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ದೇಶಕ್ಕಾಗಿ ಮಹಾ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ರಾಷ್ಟ್ರೀಯ ಮಾನವ-ಪರಿಸರ ಸಂರಕ್ಷಣಾ ಪಡೆಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ವಾಕ್ ಥಾನ್ ನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಿಂದ ಆರಂಭಗೊಂಡ ನಡಿಗೆ, ಟೌನ್ ಹಾಲ್ ವೃತ್ತ, ಸ್ವಾತಂತ್ರ್ಯ ಚೌಕದ ಮೂಲಕ ಸಾಗಿದೆ.
ವಾಕ್ ಥಾನ್ ಲ್ಲಿ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್, ಎಸ್ಪಿ ರಾಹುಲ್ ಕುಮಾರ್, ಶಾಸಕ ಜಿ.ಬಿ.ಜ್ಯೋತಿಗಣೇಶ್, ಕಿರುತೆರೆ ನಟಿ ಚಂದನಾ ಭಾಗಿಯಾಗಿದ್ದರು.
ಈ ವಾಕ್ ಥಾನ್ ಗಾಜಿನ ಮನೆವರೆಗೂ ಸಾಗಲಿದ್ದು, ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿರಲಿದ್ದಾರೆ.