PAK vs WI : ಬಾಬರ್ ಅಪರೂದ ಸಾಧನೆ.. ಮೊದಲ ಆಟಗಾರನಾಗಿ ಚರಿತ್ರೆ
ಪಾಕ್ ನಾಯಕ ಬಾಬರ್ ಅಜಮ್ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮುಲ್ತಾನ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 77 ರನ್ ಗಳಿಸಿದ್ದ ಬಾಬರ್ ಪಾಕ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಈ ಕ್ರಮದಲ್ಲಿ ಬಾಬರ್ ಅಜಮ್ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಪರೂಪದ ಸಾಧನೆ ಮಾಡಿದರು.
ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಸತತ ಒಂಬತ್ತು ಫಿಫ್ಟಿ ಪ್ಲಸ್ ಸ್ಕೋರ್‌ಗಳನ್ನು ದಾಖಲಿಸಿದ ಮೊದಲ ಆಟಗಾರ ಎಂದು ದಾಖಲೆಯನ್ನು ಬಾಬರ್ ಬರೆದಿದ್ದಾರೆ.
ಈ ಪಂದ್ಯವನ್ನು ಪಾಕಿಸ್ತಾನ 120 ರನ್‌ಗಳಿಂದ ಗೆದ್ದುಕೊಂಡಿತು. ಮೂರು ಪಂದ್ಯಗಳ ಏಕದಿನ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಪಾಕಿಸ್ತಾನ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೂರು ಸ್ವರೂಪಗಳಲ್ಲಿ ಕಳೆದ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಬಾಬರ್ ಗಳಿಸಿದ ಸ್ಕೋರ್‌ಗಳು
196 ವಿರುದ್ಧ ಆಸ್ಟ್ರೇಲಿಯಾ (2ನೇ ಟೆಸ್ಟ್ – ಮಾರ್ಚ್ 12)
67, 55 ವಿರುದ್ಧ ಆಸ್ಟ್ರೇಲಿಯಾ (3ನೇ ಟೆಸ್ಟ್ – ಮಾರ್ಚ್ 21)
757 ವಿರುದ್ಧ ಆಸ್ಟ್ರೇಲಿಯಾ (ಮೊದಲ ODI – ಮಾರ್ಚ್ 29)
114 ವಿರುದ್ಧ ಆಸ್ಟ್ರೇಲಿಯಾ (ಎರಡನೇ ODI – ಮಾರ್ಚ್ 31)
105 (ಔಟಾಗದೆ) ಆಸ್ಟ್ರೇಲಿಯಾ ವಿರುದ್ಧ (ಮೂರನೇ ODI-ಏಪ್ರಿಲ್ 2)
66 ವಿರುದ್ಧ ಆಸ್ಟ್ರೇಲಿಯಾ (ಏಕ ಟಿ20-ಏಪ್ರಿಲ್ 5)
103 vs ವೆಸ್ಟ್ ಇಂಡೀಸ್ (ಮೊದಲ ODI – ಜೂನ್ 8)
77 vs ವೆಸ್ಟ್ ಇಂಡೀಸ್ (ಎರಡನೇ ODI – ಜೂನ್ 10)