B.S.Yediyurappa | ಯಡಿಯೂರಪ್ಪ ಯಾವಾಗಲೂ ರಾಜಾಹುಲಿನೇ
ಮಂಡ್ಯ: ಯಡಿಯೂರಪ್ಪ ಯಾವಾಗಲೂ ರಾಜಾಹುಲಿನೇ. ಅವರನ್ನ ಮಾಜಿ ಮುಖ್ಯಮಂತ್ರಿ ಅನ್ನೋಕೆ ಮನಸ್ಸೇ ಆಗಲ್ಲ ಎಂದು ಹುಕ್ಕೇರಿ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಮಂಡ್ಯದ ಬೇಬಿ ಗ್ರಾಮದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿಗಳು, ಯಡಿಯೂರಪ್ಪನವರು ಬರೀ ವೀರಶೈವ ಲಿಂಗಾಯಿತರ ಧ್ವನಿ ಅಷ್ಟೇ ಅಲ್ಲ.
ಎಲ್ಲಾ ಸಮುದಾಯದವರು ಮೆಚ್ಚಿರೋದು ಯಡಿಯೂರಪ್ಪ ಎಂದು ಬಣ್ಣನೆ ಮಾಡಿದರು.
ಯಡಿಯೂರಪ್ಪ ಅವರ ಬಗ್ಗೆ ಯಾರೂ ನೆಗೆಟಿವ್ ಮಾತಾಡುವಂಗೆ ಇಲ್ಲ. ಯಡಿಯೂರಪ್ಪ ಕಷ್ಟ ಬಂದರೆ ಮನೆಯಲ್ಲಿ ಕೂರಲ್ಲ. ಮಠ, ದೇವಸ್ಥಾನಕ್ಕೆ ಹೋಗ್ತಾರೆ.

ಅಲ್ಲಿ ಮನಃ ಶಾಂತಿ ಪಡೆದುಕೊಳ್ತಾರೆ. ಸಾಧನೆ ಮಾತನಾಡಬೇಕು, ಮಾತನಾಡೋದು ಸಾಧನೆ ಆಗಬಾರದು.
ಯಡಿಯೂರಪ್ಪ ಅವರ ಬದುಕೇ ಒಂದು ಗ್ರಂಥ. ಬರೆದಂತೆ, ನುಡಿದಂತೆ ನಡೆಯುವವರು ಯಡಿಯೂರಪ್ಪ ಎಂದು ಬಿಎಸ್ ವೈ ಅವರನ್ನು ಕೊಂಡಾಡಿದರು.
ಇನ್ನು ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿದೆ. ಮನೆ ಮನೆ ಮೇಲೆ ದೇಶದ ಧ್ವಜ ಹಾರಿಸುತ್ತಿದ್ದೇವೆ.
ಅದರಂತೆ, ಮನೆ-ಮನದೊಳಗೆ ದೇಶಾಭಿಮಾನ ಬೆಳೆಸಿಕೊಳ್ಳೋಣ ಎಂದು ಶ್ರೀಗಳು ಕರೆಕೊಟ್ಟರು.