B Sriramulu | ಸಿದ್ದರಾಮಯ್ಯ ಭಸ್ಮಾಸುರ ಇದ್ದಾಗೆ, ಅವರಿಗೆ ಸ್ವಂತ ಶಕ್ತಿ ಇಲ್ಲ
ಬೀದರ್ : ವಿಪಕ್ಷ ನಾಯಕ ಸಿದ್ದರಾಮಯ್ಯ ಭಸ್ಮಾಸುರ ಇದ್ದಹಾಗೆ.
ಅವರು ಯಾವ ಪಕ್ಷದಲ್ಲಿ ಇದ್ದರೂ ಆ ಪಕ್ಷವನ್ನು ಮುಗಿಸುತ್ತಾರೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ ಶ್ರೀರಾಮುಲು ಕಿಡಿಕಾರಿದ್ದಾರೆ.
ಬೀದರ ನಗರದ ಪ್ರತಾಪ ನಗರದಲ್ಲಿ ಆರ್ ಟಿಒ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ಬಿ.ಶ್ರೀರಾಮುಲು ಇಂದು ಅಡಿಗಲ್ಲು ಹಾಕಿ ಚಾಲನೆ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ದೇಶದಲ್ಲಿ ರಿಜೆಕ್ಟೆಡ್ ಪಾರ್ಟಿ ಆಗಿದೆ. ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ, ಅವರು ಯಾವ ಪಕ್ಷದಲ್ಲಿ ಇದ್ದರೂ ಆ ಪಕ್ಷವನ್ನು ಮುಗಿಸುತ್ತಾರೆ.
ಜೆಡಿಎಸ್ ಪಕ್ಷ, ದೇವೇಗೌಡರು ತಂದೆ ಎಂದು ಹೇಳಿ, ಆ ಪಕ್ಷ ಮುಗಿಸಿದರು.
ಕಳೆದ ಬಾರಿ ಅವರ ನೇತೃತ್ವದಲ್ಲೇ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ಜನ ತಿರಸ್ಕರಿಸಿದ್ದಾರೆ.
ಅವರು ಒಂದು ಪಾರ್ಟಿಯಲ್ಲಿ ಇದಾರೆಂದು ಅವರಿಗೆ ಬೆಲೆ ಇದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ವೈಯಕ್ತಿಕವಾಗಿ ಸ್ವಂತ ಶಕ್ತಿ ಏನೂ ಇಲ್ಲ.
ಪ್ರಾದೇಶಿಕ ಪಕ್ಷ ತೆಗೆದು ವೈಯಕ್ತಿಕ ಚುನಾವಣೆ ಸ್ಪರ್ಧಿಸಿದರೇ ಜನ ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.