‘ಬಾಬಾ ಕಾ ಡಾಬಾ’ ಖ್ಯಾತಿಯ ಕಾಂತಾ ಪ್ರಸಾದ್ ಆತ್ಮಹತ್ಯೆಗೆ ಯತ್ನ : ಕಾರಣವೇನು..?
ನವದೆಹಲಿ: ‘ಬಾಬಾ ಕಾ ಡಾಬಾ’…. ಇದು ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಡಾಬಾ… ಕಳೆದ ವರ್ಷ ಕಾಂತಾ ಪ್ರಸಾದ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಯುಟ್ಯೂಬರ್ ಗೌರವ್ ವಾಸನ್ ಈ ವೀಡಿಯೋ ಮಾಡಿ, ಕಾಂತಾ ಪ್ರಸಾದ್ ಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಾದ ನಂತರ ‘ಬಾಬಾ ಕಾ ಡಾಬಾ’ ಇಡೀ ದೇಶದಲ್ಲಿಯೇ ಫೇಮಸ್ ಆಗಿತ್ತು.
ಹಲವರು ಕಾಂತಾ ಪ್ರಸಾದ್ಗೆ ಆರ್ಥಿಕ ಸಹಾಯ ಮಾಡಿದ್ದರು. ಆದ್ರೆ ಗೌರವ್ ವಾಸನ್ ಹಣಕಾಸಿನ ವಿಚಾರದಲ್ಲಿ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಕಾಂತಾ ಪ್ರಸಾದ್ ದೂರು ಸಲ್ಲಿಸಿದ್ದರು. ಇದಾದ ಬಳಿಕ ಗೌರವ್ ವಾಸನ್ ಬಳಿ ಕಾಂತಾ ಪ್ರಸಾದ್ ಕ್ಷಮೆ ಕೇಳಿದ್ದರು.
ಆದ್ರೆ ಇದೀಗ ಬಾಬಾ ಕಾ ಡಾಬಾದ ಮಾಲೀಕ ಕಾಂತಾ ಪ್ರಸಾದ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಬಗ್ಗೆ ವರದಿಯಾಗಿದೆ. ಆದ್ರೆ ಗುಣಮುಖರಾಗಿ ಮನೆಗೆ ವಾಪಸ್ ಹಿಂದಿರುಗಿದ್ದಾರೆ ಎನ್ನಲಾಗಿದೆ. ಅವರಿಗೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಇನ್ನೂ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟಿರುವ ಕಾಂತಾ ಪ್ರಸಾದ್ ಅವರು , ಕೆಲ ಯುಟ್ಯೂಬರ್ ಗಳು ಪದೇ ಪದೇ ತೊಂದರೆ ನೀಡುತ್ತಿದ್ದರು. ಇದರಿಂದ ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ. ಪದೇ ಪದೇ ಯುಟ್ಯೂಬರ್ ಗೌರವ್ ವಾಸನ್ ಬಳಿ ಕ್ಷಮೆ ಕೇಳುವಂತೆ ಒತ್ತಡ ಹಾಕಲಾಗುತ್ತಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಪೊಲೀಸರು ಇದುವರೆಗೂ ಯಾವುದೇ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಕಾಂತಾ ಪ್ರಸಾದ್ ಮೇಲೆ ಒತ್ತಡ ಹಾಕುತ್ತಿದ್ದ ಯುಟ್ಯೂಬರ್ ಗಳನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ಇದುವರೆಗೂ ಯಾವುದೇ ಎಫ್ಐಆರ್ ದಾಖಲಿಸಿಕೊಂಡಿಲ್ಲ. ಕಾಂತಾ ಪ್ರಸಾದ್ ಮೇಲೆ ಒತ್ತಡ ಹಾಕುತ್ತಿದ್ದ ಯುಟ್ಯೂಬರ್ ಗಳನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ..
ಕಟ್ಟಡ ಸಂಕೀರ್ಣ ಕುಸಿತ: ಅವಶೇಷಗಳಡಿ ಸು. 159 ಮಂದಿ, 4 ಶವ ಪತ್ತೆ
ಮೋದಿ ಸಂಪುಟಕ್ಕೆ ಸರ್ಜರಿ : ಡಿವಿಎಸ್ ಗೆ ಕೋಕ್..? ರಾಜ್ಯದ ಇಬ್ಬರಿಗೆ ಅವಕಾಶ








