Bagalkot | ಬಾಮೈದನಿಂದಲೇ ಯೋಧನ ಕೊಲೆ- Soldier killed by brother in law
ಊಟ ನೀಡುವ ವಿಚಾರಕ್ಕೆ ಜಗಳ
ಬಾದಾಮಿಯ ನೀರಲಕೇರಿ ಗ್ರಾಮದಲ್ಲಿ ಘಟನೆ
ಕರಿಸಿದ್ದಪ್ಪ ಕಳಸದ ಮೃತ ಯೋಧ
ಸಿದ್ದನಗೌಡ ದೂಳಪ್ಪ ಕೊಲೆ ಆರೋಪಿ
ಬಾಗಲಕೋಟೆ : ಊಟದ ವಿಚಾರಕ್ಕೆ ಬಾವನನ್ನು ಬಾಮೈದನೇ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಕರಿಸಿದ್ದಪ್ಪ ಕಳಸದ ಮೃತರಾಗಿದ್ದು, ಈತ ಭಾರತೀಯ ಸೇನೆ ಯೋಧರಾಗಿದ್ದರು. ಸಿದ್ದನಗೌಡ ದೂಳಪ್ಪ ಕೊಲೆ ಆರೋಪಿಯಾಗಿದ್ದಾರೆ.
ರಾಜಸ್ಥಾನದಲ್ಲಿ ಸೇವೆಯಲ್ಲಿದ್ದ ಕರಿಸಿದ್ದಪ್ಪ ಕಳಸದ ಕಳೆದ ನಾಲ್ಕು ದಿನಗಳಿಂದೆ ರಜೆಯ ಮೇರೆಗೆ ಊರಿಗೆ ಬಂದಿದ್ದರು.

ಗುರುವಾರ ರಾತ್ರಿ ಊಟ ನೀಡುವ ವೇಳೆ ಕರಿಸಿದ್ದಪ್ಪ ತನ್ನ ಪತ್ನಿ ಜೊತೆ ಜಗಳವಾಗಿದೆ. ಇದರಿಂದ ಪತ್ನಿ ವಿದ್ಯಾ ತಮ್ಮ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ.
ಇದರಿಂದ ಕೋಪದಲ್ಲಿಯೇ ಮನೆಗೆ ಬಂದ ಸಿದ್ದನಗೌಡ ದೂಳಪ್ಪ, ಕರಿಸಿದ್ದಪ್ಪ ಕಳಸದ ಅವರನ್ನ ಕೊಲೆ ಮಾಡಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಕೆರೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.