ತೋಂಟದಾರ್ಯ ಜಾತ್ರೆಗೂ ತಟ್ಟಿದ ಧರ್ಮಯದ್ಧದ ಬಿಸಿ
ಗದಗ: ಏಪ್ರಿಲ್ 16 ರಿಂದ ಪ್ರಾರಂಭವಾಗುವ ಮುದ್ರಣ ಕಾಶಿ ಗದಗ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಬೇಕು ಎಂದು ಶ್ರೀರಾಮಸೇನೆ ಒತ್ತಾಯಿಸುತ್ತಿದೆ.
ಈಗಾಗಲೇ ಜಾತ್ರೆಯ ತಯಾರಿ ನಡೆಯುತ್ತಿದ್ದು, ಅಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು ಎಂದು ಕೂಗು ಕೇಳಿಬರುತ್ತಿದೆ. ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿದ ತೀರ್ಪನ್ನು ಪಾಲಿಸದ ಕಾರಣ ಮುಸ್ಲಿಂ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ಬೇಡ ಅಂತ ಶ್ರೀರಾಮಸೇನೆ ಹೇಳಿದೆ. ಶ್ರೀರಾಮಸೇನೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಪೋಸ್ಟ್ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕರಿತು ಪ್ರತಿಕ್ರಿಯಿಸಿದ ಶ್ರೀಮಠ ಶ್ರೀಗಳು ಸಹಬಾಳ್ವೆ, ಭಾವೈಕ್ಯತೆ ನಮ್ಮ ಮಠದ ತತ್ವ. ಆದರೆ, ಸಮಾಜಿಕ ಜಾಲತಾಣದ ಚಳವಳಿ ಬಗ್ಗೆ ಮಾತನಾಡಲ್ಲ ಅಂತ ಶ್ರೀಗಳು ಹೇಳಿದ್ದಾರೆ. ಆದರೆ, ಶ್ರೀರಾಮಸೇನೆ ಮಾತ್ರ ಇದಕ್ಕೆ ಅವಕಾಶ ಕೊಡಲ್ಲ ಅಂತಿದೆ. ಜಾತ್ರೆಗೂ ಮುನ್ನ ಕರಪತ್ರದ ಮೂಲಕ ಗದಗ-ಬೆಟಗೇರಿ ಅವಳಿ ನಗರದ ಮನೆ ಮನೆಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಲು ಶ್ರೀರಾಮಸೇನೆ ಮುಂದಾಗಿದೆ.