BAN vs ZIM : ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿದ ಬಾಂಗ್ಲಾ..
ಐಸಿಸಿ ಟಿ20 ವಿಶ್ವಕಪ್ 28 ನೇ ಪಂದ್ಯದಲ್ಲಿ ಬಾಂಗ್ಲಾದೇಶ ಜಿಂಬಾಬ್ವೆಯನ್ನು 3 ರನ್ಗಳಿಂದ ಸೋಲಿಸಿದೆ. ರೋಚಕ ಪಂದ್ಯದಲ್ಲಿ ಕೊನೆಯ ಓವರ್ನಲ್ಲಿ ಜಿಂಬಾಬ್ವೆ ಗೆಲುವಿಗೆ 16 ರನ್ಗಳ ಅಗತ್ಯವಿತ್ತು. ಜಿಂಬಾಬ್ವೆ 19.5 ಓವರ್ಗಳಲ್ಲಿ 9 ವಿಕೆಟ್ಗೆ 146 ರನ್ ಗಳಿಸಲಷ್ಟೆ ಶಕ್ತವಾಯಿತು.
ಮುಜರ್ಬಾನಿ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಲು ಮುಂದಾಗಿ ಸ್ಟಂಪ್ ಔಟ್ ಆದರು. ಜಿಂಬಾಬ್ವೆ ಬ್ಯಾಟ್ಸಮನ್ ಗಳು ಮೈದಾನದಿಂದ ಹೊರಗೆ ಹೋದಾಗ ಮೂರನೇ ಅಂಪೈರ್ ಕೊನೆಯ ಎಸೆತವನ್ನು ನೋ ಬಾಲ್ ಎಂದು ಘೋಷಿಸಿದರು. ಎರಡೂ ತಂಡಗಳ ಆಟಗಾರರು ಮತ್ತೆ ಮೈದಾನಕ್ಕೆ ಮರಳಿದರು, ಜಿಂಬಾಬ್ವೆ ಅಭಿಮಾನಿಗಳು ಪವಾಡಕ್ಕಾಗಿ ಕಾಯುತ್ತಿದ್ದರು. ಆದರೇ ಅವಕಾಶ ಕೂಡಿ ಬರಲಿಲ್ಲ. ಮುಜರ್ಬಾನಿ ಕೊನೆಯ ಎಸೆತದಲ್ಲಿ ರನ್ ಗಳಿಸಲು ವಿಫಲರಾದರು.
ಬ್ರಿಸ್ಬೇನ್ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಾಂಗ್ಲಾದೇಶ 20 ಓವರ್ಗಳಲ್ಲಿ 7 ವಿಕೆಟ್ಗೆ 150 ರನ್ ಗಳಿಸಿತು. ಜಿಂಬಾಬ್ವೆ 20 ಓವರ್ಗಳಲ್ಲಿ 8 ವಿಕೆಟ್ಗೆ 147 ರನ್ ಗಳಿಸಲಷ್ಟೇ ಶಕ್ತವಾಯಿತು.
ಜಿಂಬಾಬ್ವೆ 10 ಓವರ್ಗಳಲ್ಲಿ 4 ವಿಕೆಟ್ಗೆ 64 ರನ್ ಗಳಿಸಿತು. ಇದಕ್ಕೂ ಮುನ್ನ ಬಾಂಗ್ಲಾದೇಶ ಕೂಡ 35 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಬಾಂಗ್ಲಾದೇಶ 20 ಓವರ್ಗಳಲ್ಲಿ 7 ವಿಕೆಟ್ಗೆ 150 ರನ್ ಗಳಿಸಿತು. ಅವರು 10 ಓವರ್ಗಳಲ್ಲಿ 2 ವಿಕೆಟ್ಗೆ 63 ರನ್ ಗಳಿಸಿದರು.
BAN vs ZIM: Bangla won the thrilling last ball..