Bangalore | ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕದ್ದಿದ್ದ ಕಳ್ಳಿಯ ಬಂಧನ
ಬೆಂಗಳೂರು : ಸ್ನೇಹಿತೆಯ ಮನೆಯಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಖತರ್ನಾಕ್ ಲೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಗೀತಾ ಬಂಧಿತ ಕಳ್ಳತನ ಆರೋಪಿಯಾಗಿದ್ದಾರೆ.
ಕಳೆದ ತಿಂಗಳು 16 ರಂದು ವಿದ್ಯಾರಣ್ಯಪುರದ ನಿವಾಸಿ ಲಕ್ಷ್ಮಿ ಎನ್ನುವವರ ಮನೆಗೆ ಗೀತಾ ಬಂದಿದ್ದರು. ಈ ವೇಳೆ ಒಡವೆಗಳ ಡಿಸೈನ್ ತೋರಿಸು ಅಂತಾ ಲಕ್ಷ್ಮಿ ಅವರನ್ನು ಗೀತಾ ಕೇಳಿದ್ದಾರೆ.

ಅವರ ಮಾತಿನಂತೆ ಲಕ್ಷ್ಮಿ ಚಿನ್ನಾಭರಣ ತೋರಿಸಿದ್ದಾರೆ. ಇದಾದ ಬಳಿಕ ಅಲ್ಲೇ ರಾತ್ರಿ ಉಳಿದುಕೊಂಡಿದ್ದ ಆರೋಪಿ ಗೀತಾ, ರಾತ್ರಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ.
ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಯಿಂದ 10 ಲಕ್ಷ ಮೌಲ್ಯದ 230ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. Bangalore