Bangalore | ಸಿ.ಟಿ.ರವಿ ಬ್ಯಾನರ್ ಹರಿದುಹಾಕಿದ ಬಿಂದುಗೌಡ
ಬೆಂಗಳೂರು : ಸಿಟಿ ರವಿ ಜನ್ಮದಿನದಿನದಂದೇ ಅವರ ಬಟ್ಟೆ ಹರಿದು ಯುವತಿಯೋರ್ವಳು ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದಾಳೆ.
ಇನ್ನೂ ವಿಶೇಷ ಅಂದ್ರೆ ಆಕೆ ಚಿಕ್ಕಮಗಳೂರು ಶಾಸಕರ ಬಟ್ಟೆ ಹರಿದದ್ದು ವಿಧಾನಸೌಧದೆದುರು ಅನ್ನೋದು, ಇದೇನಪ್ಪಾ ಇದು ಅಂತ ಬಾಯರಳಿಸಿ ನೋಡಬೇಡಿ…ಇದು ಜಸ್ಟ್ ಪೀಠೀಕೆ ಅಷ್ಟೆ…ಅಸಲಿ ವಿಚಾರ ಮುಂದಿದೆ ಓದಿ..
ಇಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಜನ್ಮದಿನ.
ಹೀಗಾಗಿ ಅವರ ಅಭಿಮಾನಿಗಳು ವಿಧಾಸಸೌಧದ ಮುಂದೆ ಜನುಮದಿನದ ಬ್ಯಾನರ್ ಹಾಕಿ ಶುಭ ಕೋರಿದ್ದರು.
ಇದನ್ನ ಸಾಮಾಜಿಕ ಕಾರ್ಯಕರ್ತೆ ಬಿಂದುಗೌಡ ಎಂಬುವವರು ಹರಿದು ಹಾಕಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಲ್ಲದೇ Its my duty… as a citizen of ಬೆಂಗಳೂರು ಅಂತಾ ಬರೆದುಕೊಂಡಿದ್ದಾರೆ.
ಬಿಂದುಗೌಡ ಅವರ ಈ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಯಾಕಂದರೇ ನಗರದಲ್ಲಿ ಫ್ಲೆಕ್ಸ್, ಬ್ಯಾನರ್ಸ್, ಬಂಟಿಗ್ಸ್, ಭಿತ್ತಿಪತ್ರ, ಬಾವುಟಗಳು ಸೇರಿದಂತೆ ಇತ್ಯಾದಿ ಜಾಹೀರಾತು/ಪ್ರಕಟಣೆಗಳ ಅಳವಡಿಕೆಯು ಬಿಬಿಎಂಪಿ ಕಾಯ್ದೆ 2020 ಮತ್ತು ಕರ್ನಾಟಕ ಮುಕ್ತ ಸ್ಥಳಗಳ(ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಕಲಂ(3)ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಅಂದಹಾಗೆ ಇತ್ತೀಚೆಗಷ್ಟೆ ಕೆಆರ್ ಎಸ್ ಪಾರ್ಟಿಯ ಕಾರ್ಯಕರ್ತರು ಕೂಡ ಇದೇ ರೀತಿಯ ಬ್ಯಾನರ್ ಗಳನ್ನು ಹರಿದು ಹಾಕಿದ್ದರು.