Bangalore | ರಾಜಧಾನಿಯಲ್ಲಿ ಹೆಚ್ಚಾಯ್ತು ಪುಂಡರ ಅಟ್ಟಹಾಸ
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗಿದೆ.
ಕತ್ತಿ ಮತ್ತು ಲಾಂಗ್ ಹಿಡಿದು ನಡು ರಸ್ತೆಯಲ್ಲಿ ನಾನಾ ಅವಾಂತರಗಳನ್ನು ಸೃಷ್ಠಿಸುತ್ತಿದ್ದಾರೆ.
ಅಂಗಡಿ ಒಳಗೆ ನುಗ್ಗಿ ಮಾರಕಾಸ್ತ್ರ ಬೀಸಿ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಅಲ್ಲದೇ ರಸ್ತೆಯಲ್ಲಿ ಬರುತ್ತಿದ್ದ ಯುವಕನ ಮೇಲೆ ಅಟ್ಯಾಕ್ ಮಾಡಿ ಹಣ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
ಹೆಣ್ಣೂರು ಮುಖ್ಯರಸ್ತೆಯ ಥಣಿಸಂಸದ್ರದಲ್ಲಿ ನಡೆದಿದೆ.
ಈ ಎಲ್ಲಾ ದೃಶ್ಯವಾಳಿಗಳು ಸಿಸಿ ಟಿ ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಣಿಲಾಲ್ ಎಂಬುವರ ಪ್ಲೆವುಡ್ ಮಳಿಗೆಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆ ನಡೆಸಿದ್ದಾರೆ.
ಎರಡು ಬಾರಿ ಅಂಗಡಿಗೆ ಹೋಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಕೊಡದಿದ್ದಕ್ಕೆ ಮಳಿಗೆಯ ಒಳ ನುಗ್ಗಿ ಲಾಂಗ್ ಬೀಸಿದ್ದಾರೆ.
ಇದೇ ವೇಳೆ ಪುಂಡರ ಮೇಲೆಯೇ ಮಾಲೀಕ ಚೇರ್ ಎತ್ತಿ ಬಿಸಾಡಿದ್ದಾನೆ.
ಸಿಸಿ ಟಿವಿ ದೃಶ್ಯವಳಿಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಹೆಣ್ಣೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.