Bangalore | ವಿಶ್ವಕ್ಕೆ ಭಾರತ ʼಗುರು-ಶಿಷ್ಯʼ ಪರಂಪರೆ ಕೊಡುಗೆ
ಬೆಂಗಳೂರು : ಗುರು ಎಂದರೆ ವ್ಯಕ್ತಿಯಲ್ಲ; ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯುವ ಶಕ್ತಿ.
ವಿಶ್ವಕ್ಕೆ ಸನಾತನ ಧರ್ಮದ ಅಮೂಲ್ಯ ಕೊಡುಗೆ ʻಗುರು-ಶಿಷ್ಯʼ ಪರಂಪರೆ ದೇಶದಲ್ಲಿಂದು ಹೆಚ್ಚು ಪರಿಪಕ್ವವಾಗಬೇಕು ಎಂದು ಖ್ಯಾತ ವಿಜ್ಞಾನಿ ಹಾಗೂ ಅರಬಿಂದೋ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ -ಡಾ. ಅಜಿತ್ ಸಾಬ್ನಿಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಹೆಸರಘಟ್ಟ ರಸ್ತೆಯ ಸಿಡೇದಹಳ್ಳಿಯಲ್ಲಿರುವ ಪ್ರತಿಷ್ಠಿತ ನಿಸರ್ಗ ವಿದ್ಯಾನಿಕೇತನ ಶಾಲೆಯಲ್ಲಿ ಬುಧವಾರ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾತು ಕಲಿಸಿದ ಮೊದಲು ಗುರು ತಾಯಿ, ಜೀವನದ ಪಾಠ ಕಲಿಸಿದ ಗುರು ಅಪ್ಪನಿಗೆ, ವಿದ್ಯೆಬುದ್ಧಿ ಕಲಿಸಿದ ಗುರುಗಳಿಗೆ ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು.
ಭಾರತೀಯರ ಪಾಲಿಗೆ ಗುರು ಪೂರ್ಣಿಮೆ ಅತ್ಯಂತ ಮಹತ್ವವಾದುದು. ಗುರುಗಳನ್ನು ಪೂಜಿಸುವ ಗುರುವಿನ ಮಹತ್ವವನ್ನು ಸಾರುವ ದಿನವನ್ನು ಪ್ರತಿಯೊಬ್ಬರು ಆಚರಿಸಬೇಕು. ಇದೊಂದು ಸಾರ್ವತ್ರಿಕ ಹಬ್ಬ.

ಯಾವುದೇ ಜಾತಿ, ಧರ್ಮದ ಅಂತರವಿಲ್ಲ. ಯಾವುದೇ ವ್ಯಕ್ತಿಯನ್ನು ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಶಕ್ತಿಯೇ ಗುರುವಾಗಿದ್ದು, ಇಂದಿನ ಯುವಜನರು ಅರ್ಥಮಾಡಿಕೊಂಡು ಮುನ್ನಡೆಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಉದಯರತ್ನಕುಮಾರ್, ಆಡಳಿತಾಧಿಕಾರಿ ಧನುಷ್ ಕುಮಾರ್ ಮತ್ತಿತರ ಗಣ್ಯರು ಭಾಗಿಯಾಗಿದ್ದರು.
ಇದೇ ವೇಳೆ ಶಾಲಾ ಮಕ್ಕಳು ತಮ್ಮ ಮೊದಲ ಗುರುವಾದ ತಮ್ಮ ಪೋಷಕರಿಗೆ ಪಾದಪೂಜೆ ಮಾಡಿ ಗೌರವ ಸಲ್ಲಿಸಿದರು.