Bangalore | ಮಲಗುವ ಜಾಗದ ವಿಚಾರಕ್ಕೆ ಬೆಂಗಳೂರಲ್ಲಿ ಕೊಲೆ
ಬೆಂಗಳೂರು : ದೇವಸ್ಥಾನದ ಬಳಿ ಮಲಗುವ ಜಾಗದ ವಿಚಾರಕ್ಕೆ ಬೆಂಗಳೂರಿನ ಯಶವಂತಪುರದಲ್ಲಿ ವ್ಯಕ್ತಿಯನ್ನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.
ಶಂಕರಪ್ಪ ಮೃತ ದುರ್ದೈವಿಯಾಗಿದ್ದು, ಪ್ರಕಾಶ್ ಕೊಲೆ ಆರೋಪಿಯಾಗಿದ್ದಾರೆ.
ಕೊಲೆಯ ದೃಶ್ಯವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಯಶವಂತಪುರ ಪೈಪ್ ಲೈನ್ ರಸ್ತೆಯಲ್ಲಿ ಕೊಲೆ ನಡೆದಿದೆ.
ಸೆಪ್ಟೆಂಬರ್ 13 ರಂದು ವರಸಿದ್ಧಿವಿನಾಯಕ ದೇವಸ್ಥಾನದ ಮುಂದೆ ಕೊಲೆ ಮಾಡಲಾಗಿದೆ.
ಕೊಲೆಗಾರ ಪ್ರಕಾಶ್ ಪ್ರತಿನಿತ್ಯ ದೇವಸ್ಥಾನದ ಪೌಳಿಯಲ್ಲಿ ಮಲಗುತ್ತಿದ್ದ.
ಆ ಜಾಗದಲ್ಲಿ ಶಂಕರಪ್ಪ ಮಲಗಿದ್ದಾನೆ ಎಂದು ಕೆಂಡಾಮಂಡಲನಾದ ಪ್ರಕಾಶ, ದೊಣ್ಣೆಯಿಂದ ಹೊಡೆದಿದ್ದಾನೆ.
ಗಂಭೀರವಾಗಿ ಗಾಯಗೊಂಡಿದ್ದ ಶಂಕರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಆರೋಪಿ ಪ್ರಕಾಶನನ್ನ ಬಂಧಿಸಲಾಗಿದೆ.