Bangalore ನಗರದಾದ್ಯಂತ QR ಕೋಡ್ ಇರುವ PAY CM ಪೋಸ್ಟರ್ ಗಳು
ಬೆಂಗಳೂರು : ಕಾಂಗ್ರೆಸ್ ಪಕ್ಷ 40% ಸರ್ಕಾರದ ವಿರುದ್ಧ ಪ್ರಚಾರ ಚುರುಕುಗೊಳಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವಚಿತ್ರವಿರುವ “PAY CM” ಶೀರ್ಷಿಕೆಯ ಪೋಸ್ಟರ್‌ಗಳನ್ನು ಬೆಂಗಳೂರು ನಗರದಾದ್ಯಂತ ಅಂಟಿಸಲಾಗಿದೆ.
QR ಕೋಡ್ ಜನರನ್ನು ದೂರು ನೀಡಲು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ‘40% ಕಮಿಷನ್ ಸರ್ಕಾರ’ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.
ಪ್ರಸ್ತುತ ಬಿಜೆಪಿ ಆಡಳಿತದಲ್ಲಿ 40% ಕಮಿಷನ್ ದಂಧೆ ಹೇಗಿದೆ ಅನ್ನೋದನ್ನು ತೋರಿಸಲು ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.