ಟಿಂಡರ್ ಆಪ್ ನಲ್ಲಿ ಯುವತಿಗೆ ಗಾಳ.. ಖಾಸಗಿ ಫೋಟೊ ತೆಗೆದು ಬ್ಲಾಕ್ ಮೇಲ್ Bangalore police saaksha tv
ಬೆಂಗಳೂರು : ಜಗತ್ತು ಜಾಗತೀಕ ಗ್ರಾಮವಾದ ಬಳಿಕ ಜನರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಾರೆ.
ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ವೀವ್ ಆಗಿರುವ ಮಂದಿಯಲ್ಲಿ ಕೆಲವರು ಟಿಂಡರ್ ನಂತಹ ಡೇಟಿಂಗ್ ಆಪ್ ನಲ್ಲೂ ಕಾಲ ಕಳೆಯುತ್ತಿರುತ್ತಾರೆ.
ಹೀಗೆ ಟಿಂಡರ್ ಆಪ್ ಮೂಲಕ ಪರಿಚಯವಾದ ವ್ಯಕ್ತಿ ಒಬ್ಬ, ಅವಿವಾಹಿತ ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆದು ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಹೌದು..! ಟಿಂಡರ್ ಆಪ್ ಮೂಲಕ ಅವಿವಾಹಿತ ಮಹಿಳೆಗೆ ಗಾಳಾ ಹಾಕಿ, ಆಕೆಯ ಖಾಸಗಿ ಪೊಟೋ ತೆಗೆದುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನ ಕೋಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚತ್ತೀಸ್ ಘಡ ಮೂಲದ ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ ಬಂಧಿತ ಆರೋಪಿಯಾಗಿದ್ದಾನೆ.
ಈ ಅಭಿಷೇಕ್, ಕೋಡಿಗೆಹಳ್ಳಿ ಮೂಲದ ಅವಿವಾಹಿತ ಮಹಿಳೆಯನ್ನ ಟಿಂಬರ್ ಆಪ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಮೊಬೈಲ್ ನಂಬರ್ ಪಡೆದು ಮೆಸೇಜ್, ಕಾಲ್ ಮಾಡಿ ಅಕೆಯ ಸ್ನೇಹ ಸಂಪಾದಿಸಿದ್ದನಂತೆ.
ಅಲ್ಲದೇ ಆಕೆಯ ಮನೆಗೆ ಹೋಗಿ ಪುಸಲಾಯಿಸಿ ಅಕೆಯನ್ನ ವಿವಸ್ತ್ರಗೊಳಿಸಿ ಪೋಟೋ ತೆಗೆದುಕೊಂಡಿದ್ದನಂತೆ. ಬಳಿಕ ಆಕೆಯ ಖಾಸಗಿ ಫೋಟೋಗಳನ್ನ ತೋರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದನಂತೆ.
ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದನಂತೆ. ಈ ಬಗ್ಗೆ ಮಹಿಳೆ ಕೋಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮೂರು ಗಂಟೆ ಒಳಗೆ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಮೂರು ಮೊಬೈಲ್, 3,60,000 ನಗದು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.