Bangalore | ಮೆಟ್ರೋ ಮಂದಿಗೆ ಸಿಹಿ ಸುದ್ದಿ – ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಆಟೋ ಸೇವೆ
ಬೆಂಗಳೂರು : ಮೆಟ್ರೋ ಮಂದಿಗೆ ಸಿಹಿ ಸುದ್ದಿ ಇಲ್ಲಿದೆ. ! ಮುಂದಿನ ತಿಂಗಳೊಳಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಆಟೋ ಸೇವೆ ಆರಂಭಗೊಳ್ಳಲಿದೆ !!
ಹೌದು !! ಮೆಟ್ರೋ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ನಮ್ಮ ಮೆಟ್ರೋ ಮುಂದಾಗಿದೆ.
ಸಾಮಾನ್ಯವಾಗಿ ಮೆಟ್ರೋ ನಿಲ್ದಾಣದಿಂದ ಹೊರಗಡೆ ಬಂದ ಕೂಡ ಆಟೋಗಾಗಿ ಹುಡುಕಾಡುವವರೇ ಹೆಚ್ಚು.
ಕೆಲವು ಆಟೋ ಚಾಲಕರು ನಾವು ಕೇಳಿದ ಕಡೆ ಬರುವುದಿಲ್ಲ. ಇನ್ನೂ ಕೆಲವು ಆಟೋ ಚಾಲಕರು ದುಬಾರಿ ಹಣ ಕೇಳುತ್ತಾರೆ.
ಹೀಗಾಗಿ ಈ ಎಲ್ಲಾ ಸಮಸ್ಯೆಗೆ ಕೊನೆ ಕಾಣಿಸಲೇಬೇಕೆಂದು ನಮ್ಮ ಮೆಟ್ರೋ ನಿರ್ಧಾರ ಮಾಡಿದೆ.
ಹೀಗಾಗಿ ಮೆಟ್ರೋ ನಿಲ್ದಾಣದಲ್ಲೇ ಪ್ರಿಪೇಯ್ಡ್ ಆಟೋ ಸೇವೆ ಒದಗಿಸಲು ಮುಂದಾಗಿದೆ.
ಮೆಟ್ರೊ ನಿಲ್ದಾಣಗಳಿಂದ ಆಸುಪಾಸಿನ ಮನೆಗಳಿಗೆ ಆಟೋ ಚಾಲಕರು ಹೆಚ್ಚಿನ ದರವನ್ನು ಕೇಳುತ್ತಿದ್ದರು.
ಈ ಬಗ್ಗೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಟ್ರಾಫಿಕ್ ಪೊಲೀಸರಿಗೆ ಒತ್ತಾಯಿಸಿದರು.
ಈ ಬಗ್ಗೆ ಇತ್ತೀಚಿನ ಸಭೆಯಲ್ಲಿ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೆಷನ್ ಲಿಮಿಟೆಡ್ (BMRCL) ಅಧಿಕಾರಿಗಳು ಸಹ ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್ ಕೂಡ ಬೆಂಗಳೂರು ಸಂಚಾರಿ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡರಿಗೆ ಪತ್ರ ಬರೆದಿದ್ದಾರೆ.
ಇದಕ್ಕೆ ಬೆಂಗಳೂರು ಪೊಲೀಸ್ ಇಲಾಖೆ ಕೂಡ ಹಸಿರು ನಿಶಾನೆ ತೋರಿಸಿದೆ ಎಂದು ವರದಿಯಾಗಿದ್ದು, ಎಲ್ಲಾವು ಸರಿ ಆದರೆ ಮುಂದಿನ ತಿಂಗಳೊಳಗೆ ಬೆಂಗಳೂರಿನ ಮೆಟ್ರೋ ನಿಲ್ದಾಣಗಳ ಬಳಿ ಪ್ರಿಪೇಯ್ಡ್ ಆಟೋ ಸೇವೆ ಆರಂಭಗೊಳ್ಳಲಿದೆ.