ಭಾರತ ಕೊರೊನಾ ಮುಕ್ತವಾಗಲು 2023 ಜನವರಿ ಬರಬೇಕು : ರಾಜಗುರು
ಬೆಂಗಳೂರು : ದೊರೆ ಮತ್ತು ಪ್ರಜೆಯ ಪಾಪದ ಕೆಲಸವೇ ಇಂದು ಈ ಸಮಸ್ಯೆಗೆ ಕಾರಣ. ದೇವರಿಗೆ ಶರಣಾದ್ರೆ ಮಾತ್ರ ನಾವು ಬಚಾವ್ ಆಗ್ತೀವಿ. ಸಮೃದ್ಧ ಭಾರತ ಕೊರೊನಾ ಮುಕ್ತವಾಗಲೂ 2023 ಜನವರಿ ಬರಲೇಬೇಕು ಎಂದು ರಾಜಗುರು ದ್ವಾರಕನಾಥ್ ಗುರೂಜಿ ತಿಳಿಸಿದ್ದಾರೆ.
ಕೊರೊನಾ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 2017ರಲ್ಲಿಯೇ ಹೇಳಿದ್ದೆ ಬಹಳ ಕಷ್ಟದ ವರ್ಷಗಳು ಬರುತ್ತವೆ ಅಂತ. ಯಾರೂ ಕೇಳಿಸಿಕೊಳ್ಳಲಿಲ್ಲ.
ಮೋದಿ ಎಲ್ಲೆಲ್ಲೋ ಹೋಗಿ ಬಂದ್ರು. ಗುಲ್ಬರ್ಗದ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ರೆ ಸಮಸ್ಯೆ ಬಗೆಹರಿಯುತ್ತಿತ್ತು. ಜ್ಯೋತಿಷ್ಯ ಹೇಳಿದ್ರೆ ಯಾರ ಮಾತು ಯಾರು ಕೇಳಲ್ಲ. ಗಣಗ ದತ್ತಾತ್ರೇಯ ಒಬ್ಬರೇ ಸಂಕಷ್ಟ ಪರಿಹಾರ ಮಾಡುತ್ತಾರೆ.
ಪ್ರಧಾನಿ ಭೇಟಿ ಮಾಡಬೇಕು ಎಂದು ಹೇಳಿದ್ದೆ. ತಮಿಳುನಾಡು, ಕೇರಳ ಎಲ್ಲ ಕಡೆ ಬರುತ್ತಾರೆ. ಆದ್ರೆ ರಾಜ್ಯಕ್ಕೆ ಬರಲಿಲ್ಲ. ದೊರೆ ಮತ್ತು ಪ್ರಜೆ ಪಾಪದ ಕೆಲಸವೇ ಇಂದು ಈ ಸಮಸ್ಯೆಗೆ ಕಾರಣ ಎಂದರು.
ಇದೇ ವೇಳೆ ಕೊರೊನಾ ಸಮಯದಲ್ಲೂ ಚುನಾವಣೆ ನಡೆಸಿದ ಬಗ್ಗೆ ಬೇಸರ ಹೊರಹಾಕಿದ ಅವರು, ದೇಶದಲ್ಲಿ ಚುನಾವಣೆಗಳು ಅಗತ್ಯ ಇರಲಿಲ್ಲ.
ಪಶ್ಚಿಮ ಬಂಗಾಳ ಚುನಾವಣೆ ನಡೆಸಬಾರದಿತ್ತು. ಜನರನ್ನ ಸೇರಿಸಿದ್ದೇ ಕೊರೊನಾ ಹರಡಲು ಕಾರಣ. ಎರಡು ಸರ್ಕಾರಗಳು ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ಸರ್ಕಾರ ವಿರುದ್ಧ ಅಸಮಾಧಾನ ಹೊರಹಾಕಿದರು.









