Bangalore | ಇಂದಿನಿಂದ ಮತ್ತೆ ಘರ್ಜಿಸಲಿವೆ ಬುಲ್ಡೋಜರ್ಸ್
ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನಿಂದ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಲಿದೆ.
ಆದ್ರೆ ಇಂದಾದ್ರೂ ದೊಡ್ಡವರ ಅಕ್ರಮ ಕಟ್ಟಡಕ್ಕೆ ಕೈ ಹಾಕುತ್ತಾ BBMP ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕಳೆದ ಮೂರು ದಿನಗಳಿಂದ ಬುಲ್ಡೋಜರ್ ಕಾರ್ಯಾಚರಣೆಗೆ ಬ್ರೇಕ್ ಹಾಕಲಾಗಿತ್ತು.
ಅಲ್ಲದೆ ಕಳೆದ ಎರಡು ದಿನಗಳಲ್ಲಿ ಸರ್ವೇ ಕಾರ್ಯಾಚರಣೆ ಮಾಡಲಾಗಿದೆ.
ಹೀಗಾಗಿ ಇಂದು ಸರ್ವೇ ಮಾಡಿದ ಬಹುತೇಕ ಜಾಗದಲ್ಲಿ ಜೆಸಿಬಿ ಘರ್ಜಿಸಲಿದೆ.

ಮಹದೇವಪುರ ವಲಯದಲ್ಲಿ ಇಂದು 5 ಕಡೆ ತೆರವು ಕಾರ್ಯಾಚರಣೆ ನಡೆಯಲಿದೆ.
ಇಂದು ವಿಲ್ಲಾಗಳು ಸೇರಿದಂತೆ ಕಸವನಹಳ್ಳಿ, ವಿಪ್ರೋ, ಸಲಾರ್ಪುರಿಯ, ಗ್ರೀನ್ ವುಡ್ ರೆಸಿಡೆನ್ಸಿ, ಸಕ್ರಾ ಆಸ್ಪತ್ರೆಯ ಹಿಂಭಾಗದ ರಸ್ತೆ ಸ್ಟರ್ಲಿಂಗ್ ಅಪಾರ್ಟ್ ಮೆಂಟ್, ಪೂರ್ವ ಪಾರ್ಕ್ ರಿಡ್ಜ್ ಹಿಂದಿನ ರಸ್ತೆ, ಶೆಡ್ ಗಳ ತೆರವು ಕಾರ್ಯಾಚರಣೆ ನಡೆಯಲಿದೆ.
ಕಾಡುಗೋಡಿಯ ವಿಜಯಲಕ್ಷ್ಮೀ ಕಾಲೋನಿಯಲ್ಲೂ ತೆರವು ಕಾರ್ಯಾಚರಣೆ ನಡೆಯಲಿದ್ದು, ಬೆಳ್ಳಂದೂರಿನ ಜಲಮಂಡಳಿ ಪಕ್ಕದ ಸೇತುವೆ ತೆರವಿಗೆ ಸಿದ್ಧತೆ ನಡೆಸಲಾಗಿದೆ. Bangalore Rajkaluve