Bangalore | ಒಂದೇ ಕುಟುಂಬದ ಮೂವರ ಸಾವು!
ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಮಹೇಶ್ ಕುಮಾರ್, ಜ್ಯೋತಿ, ನಂದೀಶ್ ಗೌಡ ಮೃತರು
ನೇಣು ಬಿಗಿದ ಸ್ಥಿತಿಯಲ್ಲಿ ಮಹೇಶ್ ಮೃತ ದೇಹ
ಮತ್ತೊಂದು ಕೊಠಡಿಯಲ್ಲಿ ಪತ್ನಿ, ಮಗನ ಮೃತದೇಹ
ಬೆಂಗಳೂರು : ಮನೆಯೊಂದರಲ್ಲಿ ಒಂದೇ ಕುಟುಂಬದ ಮೂವರ ಮೃತದೇಹಗಳು ಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚುಂಚನಕಟ್ಟೆ ಎಸ್ ಬಿಐ ಲೇಔಟ್ ನಿವಾಸಿ ಮಹೇಶ್ ಕುಮಾರ್, ಪತ್ನಿ ಜ್ಯೋತಿ, ಮಗ ನಂದೀಶ್ ಗೌಡ ಅವರ ಮೃತದೇಹ ಪತ್ತೆಯಾಗಿದೆ.
ಮಹೇಶ್ ಕುಮಾರ್ ಅವರು ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಇದರಿಂದ ಬೇಸತ ದಂಪತಿಗಳು ಮಗನನ್ನು ಕೊಂದು ನಂತರ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಗುರುವಾರ ಬೆಳಿಗ್ಗೆ ಕುಟುಂಬಸ್ಥರು ಹೊರಗೆ ಬರದೇ ಇದ್ದಾಗ ಅನುಮಾನಗೊಂಡ ಸ್ಥಳೀಯರು, ಮನೆಯ ಬಳಿ ಹೋಗಿ ನೋಡಿದಾಗ ಮೃತದೇಹಗಳು ಪತ್ತೆಯಾಗಿವೆ.
ಮಹೇಶ್ ಮೃತದೇಹ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದರೇ, ಪತ್ನಿ ಹಾಗೂ ಮಗನ ಮೃತದೇಹಗಳು ಮತ್ತೊಂದು ಕೊಠಡಿಯಲ್ಲಿದ್ದವು ಎಂದು ತಿಳಿದು ಬಂದಿದೆ.








