Bangalore | ಜೀವನ, ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರಿಗೆ ಕಳಪೆ ಅಂಕ
ಬೆಂಗಳೂರು : ಜೀವನ, ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರಿಗೆ ಕಳಪೆ ಅಂಕ ಬಂದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಮಲಿಂಗಾರೆಡ್ಡಿ, ಜೀವನ,ವಾಸಯೋಗ್ಯ ಸೂಚ್ಯಂಕದಲ್ಲಿ ಬೆಂಗಳೂರಿಗೆ ಕಳಪೆ ಅಂಕ ಬಂದಿದೆ. ನಾವು ಇದ್ದಾಗ ಬೆಂಗಳೂರು ಅಭಿವೃದ್ಧಿಯಾಗಿತ್ತು.
ಎಸ್.ಎಂ.ಕೃಷ್ಣ ಕಾಲದಲ್ಲೂ ಅಭಿವೃದ್ಧಿಯಾಗಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಉತ್ತಮ ಯೋಜನೆ ತಂದಿದ್ದೆವು.
ಕಾವೇರಿ ಮೂರು,ನಾಲ್ಕನೇ ಹಂತ ತಂದಿದ್ದೆವು. ಸ್ವಚ್ಚ ಬೆಂಗಳೂರು ಯೋಜನೆ ತಂದಿದ್ದೆವು.
ಶಿಕ್ಷಣ, ಆರೋಗ್ಯದಲ್ಲಿ ಉತ್ತಮ ಸೌಕರ್ಯಗಳಿದ್ದವು.

ವಿಶ್ವದ ಟಾಪ್ ೧೦ ನಲ್ಲಿ ಬೆಂಗಳೂರು ಇತ್ತು. ಆದರೆ ಇದೀಗ ಬೆಂಗಳೂರು ಕಳಪೆ ಅಂಕ ಗಳಿಸಿದೆ. ಈ ಬಾರಿ ಬೆಂಗಳೂರು ೧೪೬ ನೇ ಸ್ಥಾನಕ್ಕೆ ಬಂದಿದೆ.
ಮೂರ್ನಾಲ್ಕು ವರ್ಷದಲ್ಲಿ ಸರ್ಕಾರದ ಸಾಧನೆ ತೋರಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಕರಾಚಿ ೫೧.೮ ಅಂಕಗಳನ್ನ ಗಳಿಸಿದೆ. ಲಾವೋಸ್ ೪೬.೮ ಅಂಕಗಳನ್ನ ಗಳಿಸಿದೆ. ನಮ್ಮ ಬೆಂಗಳೂರು ೪೬.೪ ಅಂಕಗಳನ್ನ ಗಳಿಸಿದೆ.
ಬೆಂಗಳೂರು ಎಲ್ಲದರಲ್ಲೂ ಹಿಂದಕ್ಕೆ ಹೋಗಿದೆ.
ಎಕನಾಮಿಕ್ಸ್ ವರದಿಯಲ್ಲಿ ದೆಹಲಿ ೫೬.೫ ಅಂಕ ಪಡೆದು ೧೪೦ ನೇ ಸ್ಥಾನದಲ್ಲಿದ್ದರೇ ಮುಂಬೈ ೫೬.೨ ಅಂಕಗಳಿಸಿ ೧೪೧ ನೇ ಸ್ಥಾನದಲ್ಲಿದೆ.
ಚೆನ್ನೈ೫೫.೮ ಅಂಕಗಳಿಸಿ ೧೪೨ ಸ್ಥಾನ ಗಳಿಸಿದೆ. ಅಹ್ಮದಾಬಾದ್ ೫೫.೭ ಅಂಕಗಳೊಂದಿಗೆ ೧೪೩ ನೇ ಸ್ಥಾನದಲ್ಲಿದೆ.
ಬೆಂಗಳೂರು೫೪.೪ ಅಂಕದಿಂದ ೧೪೬ ಸ್ಥಾನದಲ್ಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.