Bangalore | ಎಷ್ಟು ದಿನ ಬೇಕು ಮೀಸಲಾತಿ? : ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು : ಎಷ್ಟು ದಿನ ಬೇಕು ಮೀಸಲಾತಿ? ಇನ್ನೂ ಏಕೆ ಬೇಕು ಮೀಸಲಾತಿ ಅಂತಾ ಪ್ರಶ್ನೆ ಮಾಡ್ತಾರೆ.
ಚತುರ್ ವರ್ಷದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಶಿಕ್ಷಣ, ಅಧಿಕಾರ ಎನ್ನುವಂತಿತ್ತು. ಇದು ಮೀಸಲಾತಿ ಅಲ್ಲವಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮೀಸಲಾತಿ ವಿಚಾರವಾಗಿ ತಮ್ಮದೇಯಾದ ವಾದ ಮಂಡಿದರು.
ಶಿಕ್ಷಣ, ಅಧಿಕಾರ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಸಮಾಜದಲ್ಲಿ ಯಾರೂ ಅಸಮಾನತೆ ಸೃಷ್ಠಿ ಮಾಡುತ್ತಾರೋ ಅವರೇ ಮೀಸಲಾತಿ ಬಗ್ಗೆ ಪ್ರಶ್ನೆ ಮಾಡುತ್ತಾರೆ.
ಎಷ್ಟು ದಿನ ಬೇಕು ಮೀಸಲಾತಿ? ಇನ್ನೂ ಏಕೆ ಬೇಕು ಮೀಸಲಾತಿ ಅಂತಾ ಪ್ರಶ್ನೆ ಮಾಡ್ತಾರೆ.

ಆದ್ರೆ ಚತುರ್ ವರ್ಷದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಶಿಕ್ಷಣ, ಅಧಿಕಾರ ಎನ್ನುವಂತಿತ್ತು.
ಇದು ಮೀಸಲಾತಿ ಅಲ್ಲವಾ ಎಂದು ಪ್ರಶ್ನೆ ಮಾಡಿದರು.
ಇದೇ ವೇಳೆ ಆರ್ಯರು ಮತ್ತು ದ್ರಾವಿಡರು ಎಂಬ ವಿಚಾರವಾಗಿ ಮಾತನಾಡಿ ಸಿದ್ದರಾಮಯ್ಯ, ಆರ್ಯರು ವಲಸೆ ಬಂದರು ಅಂದ್ರೆ ಎಲ್ಲ ನನ್ನ ಮೇಲೆ ಬೀಳ್ತಾರೆ.
ದ್ರಾವಿಡರ ಮೇಲೆ ದಬ್ಬಾಳಿಕೆ ಮಾಡಿದ್ರು ಅಂದ್ರೆ ಕೋಪ ಬಂದು ಬಿಡುತ್ತೆ ಅವರಿಗೆ. ನನ್ನ ಮೇಲೆ ಮುಗಿ ಬಿದ್ದುಬಿಡ್ತಾರೆ.
ಈ ಹಿಂದೆ ಬ್ರಾಹ್ಮಣರು ಮಾತ್ರ ಓದಬೇಕಿತ್ತು, ಬ್ರಾಹ್ಮಣರು ಮಾತ್ರ ಅಧಿಕಾರ ಹೊಂದಬೇಕಿತ್ತು. ಇದು ಮೀಸಲಾತಿ ಅಲ್ವಾ ಎಂದು ಪ್ರಶ್ನಿಸಿದರು.








