Bangalore | ಕುಡಿದ ಮತ್ತಿನಲ್ಲಿ ಅತ್ತೆಯ ಕೊಲೆಗೈದ ಅಳಿಯ
ಬೆಂಗಳೂರು : ಕುಡಿದ ಮತ್ತಿನಲ್ಲಿ ವ್ಯಕ್ತಿಯೊರ್ವ ಹೆಂಡತಿ ಎಂದುಕೊಂಡು ಅತ್ತೆಯನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯ ಸಂಜಯನಗರದಲ್ಲಿ ನಡೆದಿದೆ.
ಸೌಭಾಗ್ಯ ಕೊಲೆಯಾದ ಮಹಿಳೆಯಾಗಿದ್ದು, 35 ವರ್ಷದ ನಾಗರಾಜ್ ಕೊಲೆ ಆರೋಪಿಯಾಗಿದ್ದಾನೆ.
ಸೌಭಾಗ್ಯ ಅವರ ಮಗಳು ಭವ್ಯಶ್ರಿ ಅವರನ್ನ ನಾಗರಾಜ್ ಕಳೆದ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ.
ಡ್ರೈವಿಂಗ್ ಕೆಲಸ ಮಾಡುತ್ತಿದ್ದ ನಾಗರಾಜ್ ಕುಡಿದಕ್ಕೆ ದಾಸನಾಗಿದ್ದು, ಹಾಗಾಗ ಮನೆಯಲ್ಲಿ ಗಲಾಟೆ ಆಗುತ್ತಿತ್ತು.
ಇದರಿಂದ ಬೇಸತ್ತ ಭವ್ಯ ತಾಯಿಯ ಮನೆ ಸೇರಿಕೊಂಡಿದ್ದರು.
ಅಲ್ಲದೇ ವಿಚ್ಛೇಧನಕ್ಕೂ ಕೂಡ ತಯಾರಿ ನಡೆಯುತ್ತಿತ್ತು.
ಆದ್ರೆ ಜುಲೈ 13 ರಂದು ನಾಗರಾಜ್ ಕುಡಿದು ಸೌಭಾಗ್ಯ ಮನೆಗೆ ಆಗಮಿಸಿದ್ದ.
ಅಲ್ಲದೇ ಪತ್ನಿಯನ್ನ ತನ್ನ ಜೊತೆ ಕಳಿಸಿಕೊಡುವಂತೆ ಗಲಾಟೆ ಮಾಡಿದ್ದಾನೆ.
ಈ ಗಲಾಟೆ ವಿಕೋಪಕ್ಕೆ ತಿರುಗಿ ಸುತ್ತಿಗೆಯಲ್ಲಿ ಅತ್ತಿಗೆ ಸೌಭಾಗ್ಯ ಅವರ ತಲೆಗೆ ಹೊಡೆದಿದ್ದಾನೆ.
ಇದರಿಂದ ತೀವ್ರ ರಕ್ತಸ್ರಾವದಿಂದ ಸೌಭಾಗ್ಯ ಅಸ್ವಸ್ಥರಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸೌಭಾಗ್ಯ ಕೊನೆಯುಸಿರೆಳೆದಿದ್ದಾರೆ.
ಇತ್ತ ಘಟನೆ ಸಂಬಂಧ ಹೆಚ್ ಎ ಎಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರು ದಾಖಲಿಸಿಕೊಂಡಿರುವ ಆರೋಪಿ ನಾಗರಾಜ್ ಅವರನ್ನ ಬಂಧಿಸಿದ್ದಾರೆ.