ಭಿಕ್ಷೆಗಾಗಿ ಬರುತ್ತೆ : ಲಕ್ಷಗಟ್ಟಲೆ ದೋಚುತ್ತೆ ಈ ಖತರ್ನಾಕ್ ಬಿಹಾರಿ ಲೇಡಿ ಗ್ಯಾಂಗ್..!
ಬೆಂಗಳೂರು: ಬಿಹಾರಿ ಮಹಿಳೆಯರ ಗ್ಯಾಂಗ್ ಒಂದು ಸಿಲಿಕಾನ್ ಸಿಟಿಗೆ ನುಗ್ಗಿದೆ. 6 ಮಹಿಳೆಯರ ಈ ಗ್ಯಾಂಗ್ ಭಕ್ಷೆ ಬೇಡುವ ನೆಪದಲ್ಲಿ ಬಂದು ಸಿಕ್ಕ ಸಿಕ್ಕಿದನ್ನೆಲ್ಲಾ ದೋಚಿ ಎಸ್ಕೇಪ್ ಆಗುತ್ತೆ. ಹೌದು.. ಭಿಕ್ಷೆ ಬೇಡುವ ನೆಪದಲ್ಲಿ ಬರುವ ಮಹಿಳೆಯರು ಜನರ ಗಮನ ಬೇರಡೆ ಸೆಳೆದು ಕೌಂಟರ್ ನಲ್ಲಿರುವ ಹಣವನ್ನು ಕದ್ದು, ಜನಜಂಗುಳಿಯ ಮಾರುಕಟ್ಟೆಗಳಲ್ಲಿ ಮರೆ ಆಗ್ತಾರೆ. ಈ ಖತರ್ನಾಕ್ ಕಳ್ಳಿಯರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂತ್ರಿ ಮಾಲ್ ಗೆ ಬೀಗ ಹಾಕಿದ ಬಿಬಿಎಂಪಿ..! ಕಾರಣ ಏನ್ ಗೊತ್ತಾ…?
ಬೆಂಗಳೂರಿನ ಎಪಿಎಂಸಿಗೆ ಕಾಲಿಟ್ಟ ಈ ತಂಡ ಕ್ಷಣಾರ್ಧದಲ್ಲಿ ಹಣ ಕದ್ದು ಎಸ್ಕೇಪ್ ಆಗಿದೆ. ಫೆಬ್ರವರಿ 23ರಂದು ಎಪಿಎಂಸಿಯಲ್ಲಿರುವ ಅಂಗಡಿಗೆ ಮಹಿಳೆಯರ ಗ್ಯಾಂಗ್ ಲಗ್ಗೆ ಇಟ್ಟಿತ್ತು. ಕೆಲವರು ಭಿಕ್ಷೆ ನೀಡುವಂತೆ ಕ್ಯಾಶ್ ಕೌಂಟರ್ ಬಳಿ ಬಂದು ನಿಂತಿದ್ದಾರೆ. ಈ ವೇಳೆ ಮಾಲೀಕ ಮಹಿಳೆಯನ್ನ ಅಂಗಡಿಯಿಂದ ಹೊರ ಕಳುಹಿಸಿಸಲು ಗಲ್ಲಾ ಪೆಟ್ಟಿಗೆಯಿಂದ ಎದ್ದು ಹೊರ ಬಂದಿದ್ದಾರೆ. ಅಷ್ಟರಲ್ಲಿಯೇ ಮತ್ತೊಬ್ಬ ಮಹಿಳೆ ನಿಧಾನಕ್ಕೆ ಕ್ಯಾಶ್ ಕೌಂಟರ್ ಬಳಿ ಬಂದು ಹಣದ ಕಟ್ಟು ಎತ್ತಿ ಎಸ್ಕೇಪ್ ಆಗಿದ್ದಾಳೆ. ಮಹಿಳೆಯರನ್ನ ಹೊರಗೆ ಕಳುಹಿಸಿ ಗಲ್ಲಾಪೆಟ್ಟಿಗೆ ಬಳಿ ಬಂದಾಗ ವ್ಯಕ್ತಿಗೆ ಹಣ ಕಳ್ಳತನ ಆಗಿರೋದು ಗಮನಕ್ಕೆ ಬಂದಿದೆ. ಆದ್ರೆ ಅಷ್ಟರಲ್ಲೇ ಈ ಐನಾತಿ ಕಳ್ಳಿಯರು ಎಸ್ಕೇಪ್ ಆಗಿದ್ದಾರೆ. ಈ ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕರು ದೂರು ದಾಖಲಿಸಿದ್ದಾರೆ.