ಮಂತ್ರಿ ಮಾಲ್ ಗೆ ಬೀಗ ಹಾಕಿದ ಬಿಬಿಎಂಪಿ..! ಕಾರಣ ಏನ್ ಗೊತ್ತಾ…?
ಬೆಂಗಳೂರು : ಪ್ರಸಿದ್ಧ ಮಾಲ್ ಆದ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್ ಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಹೌದು 3 ವರ್ಷಗಳಿಂದ ಬರೋಬ್ಬರಿ ರೂ. 32 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಹಿನ್ನೆಲೆ ಮಂತ್ರಿ ಮಾಲ್ ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯ ಹೃದಯವನ್ನ ಆಲೂಗಡ್ಡೆ ಜೊತೆ ಬೇಯಿಸಿ ಉಣಬಡಿಸಿ ತಿಂದ ರಾಕ್ಷಸ..!
ಬಿಬಿಎಂಪಿ ಕಂದಾಯಾಧಿಕಾರಿ ಪ್ರಸನ್ನ ಕುಮಾರ್ ಅವರು ಈ ಕುರಿತು ಮಾತನಾಡಿದ್ದು, ಕಳೆದ 3 ವರ್ಷಗಳಿಂದ ಮಂತ್ರಿ ಮಾಲ್ ಮಾಲೀಕರು ತೆರಿಗೆ ಕಟ್ಟಿಲ್ಲ. ಇಲ್ಲಿಯವರೆಗೂ ರೂ. 32 ಕೋಟಿ ಬಾಕಿ ಉಳಿದಿದೆ. ಹೀಗಾಗಿ ನೊಟೀಸ್ ಕೂಡ ನೀಡಲಾಗಿತ್ತು. ಆದರೂ ಮಾಲೀಕರು ತೆರಿಗೆ ಕಟ್ಟಿರಲಿಲ್ಲ. ಹೀಗಾಗಿ ಮಾಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್ನೂ ಮಾಲ್ ಗೆ ಬೀಗ ಹಾಕಲಾಗಿದೆ. ಈ ಹಿಂದೆ ಮಾಲ್ ಮಾಲೀಕರು ರೂ. 10 ಕೋಟಿಯ ಚೆಕ್ ನೀಡಿದ್ದರು. ಆದರೆ, ಅದು ಬೌನ್ಸ್ ಆಗಿದೆ. ಹೀಗಾಗಿ ಪಾಲಿಕೆಯು ಕಾನೂನಿನಡಿ ಬೀಗ ಹಾಕಿ ಮಾ. 1ರ ವರೆಗೆ ತೆರಿಗೆ ಪಾವತಿ ಮಾಡಲು ಕಾಲವಕಾಶ ನೀಡಿದೆ ಎಂದು ತಿಳಿಸಿದ್ದಾರೆ.
ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್ ಏರಿ ಸವಾರಿ ಹೊರಟ ‘ದೀದಿ’..!
ಇನ್ನೂ ಕರೊನಾ ಹಿನ್ನೆಲೆಯಲ್ಲಿ ಬಂದ್ ಆಗಿ ಇದಾಗಲೇ ಸಾಕಷ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸಿರುವ ಮಂತ್ರಿಮಾಲ್ ಕರೊನಾಕ್ಕಿಂತಲೂ ಮುಂಚೆಯೇ ತೆರಿಗೆ ಕಟ್ಟದ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 3 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಂತ್ರಿ ಮಾಲ್ ಗೆ BBMP ಮಾರ್ಚ್ 1 ರವರೆಗೂ ಗಡುವು ನೀಡಿದೆ. ಒಂದು ವೇಳೆ ಹಣವನ್ನು ಪಾವತಿ ಮಾಡದೇ ಹೋದರೆ ಮಾಲ್ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಮಂತ್ರಿ ಬರೋಬ್ಬರಿ 32 ಕೋಟಿ ರೂಪಾಯಿ ತೆರಿಗೆ ಪಾವತಿಸಬೇಕಿದೆ. ಇದರಲ್ಲಿ 22 ಕೋಟಿ ರೂಪಾಯಿ ಅಸಲಿ ಹಾಗೂ 10 ಕೋಟಿ ರೂಪಾಯಿ ತೆರಿಗೆ ಸೂಕ್ತ ಸಮಯದಲ್ಲಿ ಪಾವತಿ ಮಾಡದೇ ಇರುವುದಕ್ಕೆ ಬಡ್ಡಿ. ಒಟ್ಟು 32 ಕೋಟಿ ರೂಪಾಯಿಗಳನ್ನು ಬರುವ ಸೋಮವಾರದ ಒಳಗೆ ಬಿಬಿಎಂಪಿಗೆ ನೀಡಬೇಕಿದೆ.
ಯಡಿಯೂರಪ್ಪ ಡಕೋಟಾ ಬಸ್ ನಲ್ಲಿ ಕೂತಿದ್ದಾರೆ : ಸಿದ್ದರಾಮಯ್ಯ