ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್​  ಏರಿ ಸವಾರಿ ಹೊರಟ ‘ದೀದಿ’..!

1 min read

ಬಾಯಲ್ಲೇನು ಇಟ್ಕೊಂಡಿದೀರಾ ಎನ್ನುತ್ತಾ ಸ್ಕೂಟರ್​  ಏರಿ ಸವಾರಿ ಹೊರಟ ‘ದೀದಿ’..!

ಕೋಲ್ಕತ:  ದೇಶದಲ್ಲಿ ಶತಕ ಬಾರಿಸಿರುವ ಪೆಟ್ರೋಲ್ ಡೀಸೆಲ್ ದರ ಏರಿಕೆಯ ಪರ್ವ ನಿಲ್ಲವ ಲಕ್ಷಣ ಕಾಣಿಸುತ್ತಿಲ್ಲ. ಇತ್ತ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಧನ ದರ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕುತ್ತಿಗೆಗೆ ಪ್ಲೇಕಾರ್ಡ್​ ನೇತು ಹಾಕಿಕೊಂಡು ಎಲೆಕ್ಟ್ರಿಕ್​ ಸ್ಕೂಟರ್​ ನಲ್ಲಿ ಸವಾರಿ ಮಾಡಿದ್ದಾರೆ. ಪ್ಲೇ ಕಾರ್ಡ್​ ನಲ್ಲಿ ‘ನಿಮ್ಮ ಬಾಯಲ್ಲಿ ಏನು ತುಂಬಿಕೊಂಡಿದ್ದೀರಿ. ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲದ ದರ ಏರಿಕೆಯಾಗುತ್ತಿದೆ’ ಎನ್ನುವ ಬರಹವು ಕಂಡುಬಂದಿದೆ.

ಮಹಿಳೆಯ ಹೃದಯವನ್ನ ಆಲೂಗಡ್ಡೆ ಜೊತೆ ಬೇಯಿಸಿ ಉಣಬಡಿಸಿ ತಿಂದ ರಾಕ್ಷಸ..!

ಮಮತಾ ಬ್ಯಾಜರ್ಜಿ ಅವರನ್ನು  ಸಚಿವ ಫಿರ್ಹಾದ್ ಹಕೀಮ್ ಅವರು ಸ್ಕೂಟರ್​ನಲ್ಲಿ ಕೂರಿಸಿಕೊಂಡು ಸವಾರಿ ನಡೆಸಿದ್ದಾರೆ. ಮಮತಾ ಅವರು ದಾರಿಯುದ್ದಕ್ಕೂ ರಸ್ತೆ ಬಳಿ ಸೇರಿದ್ದ ಜನರಿಗೆ ಕೈ ಬೀಸುತ್ತಾ ಸಾಗಿದ್ದಾರೆ. ದೇಶದಲ್ಲಿ ಮೋದಿ ಸರ್ಕಾರ ಬರುವಾಗ ಬಂದ ನಂತರ ಇಂಧನ ಬೆಲೆ ಯಾವ ರೀತಿಯಲ್ಲಿ ವ್ಯತ್ಯಾಸವಾಗಿದೆಯನ್ನುವುದನ್ನು ನೀವೇ ನೋಡಬಹುದು. ಮೋದಿ ಮತ್ತು ಅಮಿತ್​ ಷಾ ಜೋಡಿ ದೇಶವನ್ನು ಮಾರಾಟ ಮಾಡುತ್ತಿದೆ. ಬಿಜೆಪಿ ದೇಶದ್ರೋಹಿಗಳ ಪಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶ್ ವಾಸಿಯೋ ಗಮನಿಸಿ : ಬೆಲೆ ಏರಿಕೆ ಖಂಡಿಸಿ ನಾಳೆ ಭಾರತ್ ಬಂದ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd