ಮಹಿಳೆಯ ಹೃದಯವನ್ನ ಆಲೂಗಡ್ಡೆ ಜೊತೆ ಬೇಯಿಸಿ ಉಣಬಡಿಸಿ ತಿಂದ ರಾಕ್ಷಸ..!

1 min read

man baked women’s heart with potato

ಮಹಿಳೆಯ ಹೃದಯವನ್ನ ಆಲೂಗಡ್ಡೆ ಜೊತೆ ಬೇಯಿಸಿ ಉಣಬಡಿಸಿ ತಿಂದ ರಾಕ್ಷಸ..!

ಅಮೆರಿಕಾ :  ವ್ಯಕ್ತಿಯೋರ್ವ ಮೂವರನ್ನ ಬರ್ಬರವಾಗಿ ಕೊಲೆ ಮಾಡಿ ಮೃತಪಟ್ಟ ಮಹಿಳೆಯ ಹೃದಯವನ್ನು ದೇಹದಿಂದ ಹೊರತೆಗೆದಿದ್ದಾನೆ. ಇಷ್ಟಕ್ಕೇ ಆತನ ವಿಕೃತಿ ನಿಂತಿಲ್ಲ. ಆ ಹೃದಯವನ್ನ  ಆಲೂಗಡ್ಡೆಯೊಂದಿಗೆ ಬೇಯಿಸಿ, ಮತ್ತಿಬ್ಬರನ್ನು ಕೊಲ್ಲುವ ಮುನ್ನ ಅದನ್ನ ಉಣಬಡಿಸಿರುವ ಭಯಾನಕ ಘಟನೆ ಅಮೆರಿಕಾದ ಒಕ್ಲಹೋಮದಲ್ಲಿ ನಡೆದಿದೆ.

ಅಭಿಮಾನಿಗಳ ಪರ ಕ್ಷಮೆಯಾಚಿಸಿದ ದರ್ಶನ್ : ಧನ್ಯವಾದ ಎಂದ ಜಗ್ಗೇಶ್..!

ಆರೋಪಿಯನ್ನು ಲಾರೆನ್ಸ್ ಪಾಲ್ ಆಂಡರ್ಸನ್ ಎಂದು ಗುರುತಿಸಲಾಗಿದ್ದು, ಈತ ತನ್ನ ನೆರೆಮನೆಯಲ್ಲಿ ವಾಸವಾಗಿದ್ದ ಮಹಿಳೆಯ  ಹೃದಯವನ್ನು ಕತ್ತರಿಸಿ ಹೊರತೆಗೆದಿದ್ದಾನೆ. ಬಳಿಕ ಹೃದಯವನ್ನು ಆಲೂಗಡ್ಡೆಯೊಂದಿಗೆ ಬೇಯಿಸಿ ತಿಂದಿದ್ದಾನೆ. ಬಳಿಕ ಉಳಿದಿದ್ದನ್ನ  ತನ್ನ ಚಿಕ್ಕಪ್ಪನ ಮನೆಗೆ ತೆಗೆದುಕೊಂಡು ಹೋಗಿ ಚಿಕ್ಕಪ್ಪ ಮತ್ತು ಅವರ ಪತ್ನಿಗೆ ಉಣಬಡಿಸಿದ್ದಾನೆ, ಬಲವಂತವಾಗಿ ತಿನ್ನಲು ಒತ್ತಾಯಿಸಿದ್ದಾನೆ. ಆದರೆ ಅವರು ಅದನ್ನ ತಿನ್ನಲು ಒಪ್ಪದ ಹಿನ್ನೆಲೆ ಹಲ್ಲೆ ಮಾಡಿ  ತನ್ನ ಚಿಕ್ಕಪ್ಪ ಮತ್ತು ಅವರ ನಾಲ್ಕು ವರ್ಷದ ಮಗಳನ್ನೂ ಸಹ ಕೊಲೆ ಮಾಡಿದ್ದಾನೆ. ತನ್ನ ಚಿಕ್ಕಮ್ಮನ ಮೇಲೆ ಕೂಡ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದಾನೆ.

ಮುಂಬೈನಲ್ಲೊಂದು ಮನಕಲಕುವ ಘಟನೆ : ಮಗ ಬದುಕಿದ್ದಾನೆಂದು ಶವದ ಜೊತೆ ಕಾಲ ಕಳೆದ ತಾಯಿ..!

ಡ್ರಗ್‌ ಎಡಿಕ್ಟ್‌ ಆಗಿರುವ ಲಾರೆನ್ಸ್‌ಗೆ ಇದಾಗಲೇ ಮಾದಕದ್ರವ್ಯಗಳ ಕೇಸ್‌ನಲ್ಲಿ 20 ವರ್ಷಗಳ ಶಿಕ್ಷೆಯಾಗಿದೆ. ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಆತ ಬಿಡುಗಡೆ ಹೊಂದಿ ಈ ಕೃತ್ಯ ಎಸಗಿದ್ದಾನೆ. ಈ ಕೊಲೆಗೆ ನಿಖರ ಕಾರಣವೇನು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಮೊದಲು ಆತ ಕೊಂದಿರುವುದು ನೆರೆಮನೆಯ ಮಹಿಳೆಯನ್ನು. ನಂತರ ಆಕೆಯ ಹೃದಯವನ್ನು ಶರೀರದಿಂದ ಹೊರಕ್ಕೆ ತೆಗೆದು ಆಲೂಗಡ್ಡೆ ಜತೆ ಬೇಯಿಸಿದ್ದಾನೆ.

man baked women’s heart with potato

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd