Bank Holidays 2023 : ಏಪ್ರಿಲ್ ತಿಂಗಳಲ್ಲಿ ಒಟ್ಟು ಹದಿನೈದು ದಿನಗಳ ಕಾಲ ರಜಾ….
ಪ್ರತಿ ತಿಂಗಳ ಆರಂಭದಲ್ಲಿ ಬ್ಯಾಂಕ್ ತನ್ನ ರಜಾ ಪಟ್ಟಿಯನ್ನ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ರಜಾ ದಿನಗಳು ಬಂದಿದ್ದು, ಒಟ್ಟು 15 ವಿವಿಧ ದಿನಗಳ ಕಾಲ ಬ್ಯಾಂಕ್ ಗಳು ಮುಚ್ಚಿರಲಿವೆ. ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕ್‌ಗಳು ತೆರೆದಿದ್ದರೆ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ಬ್ಯಾಂಕ್‌ಗಳು ಮುಚ್ಚಿರುತ್ತವೆ.
ಇದಲ್ಲದೆ, ಈ ವರ್ಷ ಏಪ್ರಿಲ್‌ನಲ್ಲಿ ಮಹಾವೀರ ಜಯಂತಿ, ಗುಡ್ ಫ್ರೈಡೆ, ಅಂಬೇಡ್ಕರ್ ಜಯಂತಿ, ಈದ್-ಉಲ್-ಫಿತರ್ ಮತ್ತು ಬೈಸಾಖಿಯಂತಹ ಹಬ್ಬಗಳಲ್ಲಿ ಬ್ಯಾಂಕ್ ಗಳು ರಜಾ ಇರಲಿವೆ.
ಈ ದಿನಗಳಲ್ಲಿ ಬ್ಯಾಂಕ್ ರಜಾ ಇರಲಿದೆ.
ಏಪ್ರಿಲ್ 1 Annual closing of Bank Accounts
ಏಪ್ರಿಲ್ 4 ಮಹಾವೀರ ಜಯಂತಿ
ಏಪ್ರಿಲ್ 5 ಬಾಬು ಜಗಜೀವನ್ ರಾಮ್ ಅವರ ಜನ್ಮದಿನ
ಏಪ್ರಿಲ್ 7 ಗುಡ್ ಪ್ರೈಡೇ
ಏಪ್ರಿಲ್ 14 ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ /ಬೋಹಾಗ್ ಬಿಹು/ ವೈಶಾಖಿ/ಬೈಸಾಖಿ/ತಮಿಳು ಹೊಸ ವರ್ಷದ ದಿನ/
ಏಪ್ರಿಲ್ 15 ವಿಷು/ಬೋಹಾಗ್ ಬಿಹು/ಹಿಮಾಚಲ ದಿನ/ಬಂಗಾಳಿ ಹೊಸ ವರ್ಷದ ದಿನ (ನಬಾಬರ್ಶಾ)
ಏಪ್ರಿಲ್ 18 ಶಬ್-I-ಖಾದರ್
ಏಪ್ರಿಲ್ 21 ಈದ್-ಉಲ್-ಫಿತರ್ (ರಂಜಾನ್ ಈದ್)/
ಏಪ್ರಿಲ್ 22 ರಂಜಾನ್ ಈದ್ (ಈದ್-ಉಲ್-ಫಿತರ್) ಹಬ್ಬದಂದು ಬ್ಯಾಂಕ್ ಗಳು ರಜಾ ಇರಲಿವೆ.
Bank Holidays 2023 : Holidays for a total of fifteen days in the month of April….