RBI | ಬ್ಯಾಂಕ್ ಗ್ರಾಹಕರೇ ಗಮನಿಸಿ! 15 ದಿನ ಬ್ಯಾಂಕ್ ಗಳಿಗೆ ರಜೆ
ನವದೆಹಲಿ : ಇನ್ನೇನು 8 ದಿನಗಳ ನಂತರ ಹೊಸ ತಿಂಗಳು ಬರಲಿದೆ. ಏಪ್ರಿಲ್ ಆಗಮನದೊಂದಿಗೆ ಹೊಸ ಆರ್ಥಿಕ ವರ್ಷವೂ ಶುರುವಾಗಲಿದೆ.
ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯ ಪ್ರಕಾರ, ಮುಂದಿನ ತಿಂಗಳು ಏಪ್ರಿಲ್‌ನಲ್ಲಿ ವಾರದ ರಜಾದಿನಗಳು ಸೇರಿದಂತೆ ಒಟ್ಟು 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಆದ್ರೆ ಅನೇಕ ರಜಾದಿನಗಳು ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.
ರಜಾದಿನಗಳ ಪಟ್ಟಿ ಹೀಗಿದೆ.
ಏಪ್ರಿಲ್ 1 – ಬ್ಯಾಂಕ್ ಖಾತೆಗಳ ವಾರ್ಷಿಕ ಮುಚ್ಚುವಿಕೆ
ಏಪ್ರಿಲ್ 2 –ಯುಗಾದಿ ಹಬ್ಬ
ಏಪ್ರಿಲ್ 3 – ಭಾನುವಾರ
ಏಪ್ರಿಲ್ 4 – ಸರಿಹುಲ್-ರಾಂಚಿಯಲ್ಲಿ ಬ್ಯಾಂಕ್ ಗಳಿಗೆ ರಜೆ
ಏಪ್ರಿಲ್ 5 – ಬಾಬು ಜಗಜೀವನ್ ರಾಮ್ ಅವರ ಜನ್ಮದಿನ – ಹೈದರಾಬಾದ್‌ನಲ್ಲಿ ಬ್ಯಾಂಕುಗಳಿಗೆ ರಜೆ
ಏಪ್ರಿಲ್ 9 – ತಿಂಗಳ 2 ನೇ ಶನಿವಾರ
ಏಪ್ರಿಲ್ 10– ಭಾನುವಾರ
ಏಪ್ರಿಲ್ 14 – ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ
ಏಪ್ರಿಲ್ 15 – ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕುಗಳಿಗೆ ರಜೆ.
ಏಪ್ರಿಲ್ 16 – ಬೊಹಾಗ್ ಬಿಹು – ಗುವಾಹಟಿಯಲ್ಲಿ ಬ್ಯಾಂಕ್ ಇರೋಲ್ಲ
ಏಪ್ರಿಲ್ 17 – ಭಾನುವಾರ
ಏಪ್ರಿಲ್ 21 – ಗಡಿಯಾ ಪೂಜೆ
ಏಪ್ರಿಲ್ 23 – ತಿಂಗಳ ನಾಲ್ಕನೇ ಶನಿವಾರ
ಏಪ್ರಿಲ್ 24 – ಭಾನುವಾರ
ಏಪ್ರಿಲ್ 29 – ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ Banks To Remain Closed For 15 Days In April 2021 saaksha tv