ಬಂಟ್ವಾಳ ರೈಲು ಡಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿ….
ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪುರಸಭೆ ವ್ಯಾಪ್ತಿಯ ಮೊಡಂಕಾಪು ಎಂಬಲ್ಲಿ ಅಪಘಾತ ಸಂಭಸಿದೆ.
40 ವರ್ಷದ ಮುಂಡಾಡಿ ನಿವಾಸಿ ಪ್ರವೀಣ್ ಪೂಜಾರಿ ಎಂಬುವವರು ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: electricity supply: ರೈತರ ಪಂಪ್ ಸೆಟ್ ಗಳಿಗೆ ನಿತ್ಯ 7 ಗಂಟೆ ವಿದ್ಯುತ್ ಪೂರೈಕೆಗೆ ಬದ್ಧ – ವಿ ಸುನೀಲ್ ಕುಮಾರ್
ಪ್ರವೀಣ್ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುವಾಗ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಪ್ರವೀಣ್ ತಲೆಗೆ ಬಲವಾದ ಏಟು ಬಿದ್ದ ಪರಿಣಾಮ ರಕ್ತ ಸೋರಿಕೆಯಿಂದಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಬಂಟ್ವಾಳ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.