ಅವಕಾಶ ಕೊಟ್ಟಿದ್ದೇ ದೊಡ್ಡದ್ದು, ಬಿಎಸ್ ವೈ ಕೆಳಗಿಳಿಯೋದು ಪಕ್ಕಾ

1 min read
basanagouda-patil-yatnal

ಅವಕಾಶ ಕೊಟ್ಟಿದ್ದೇ ದೊಡ್ಡದ್ದು, ಬಿಎಸ್ ವೈ ಕೆಳಗಿಳಿಯೋದು ಪಕ್ಕಾ : basanagouda-patil-yatnal

ಬೆಂಗಳೂರು : ಪಕ್ಷದ ಸಿದ್ದಾಂತದ ಹಿನ್ನೆಲೆಯಲ್ಲೆ ಎರಡು ವರ್ಷ ಅವಕಾಶ ಕೊಟ್ಟಿದ್ದೇ ದೊಡ್ಡದ್ದು. ಮೇ 2 ರ ನಂತರ ಸಿಎಂ ಬದಲಾಗೋದು ಪಕ್ಕಾ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೇ 2 ರ ನಂತರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯೋದು ಗ್ಯಾರಂಟಿ.

ಮೇ 2ರ ನಂತರ ಯಾವ ಸಮಯದಲ್ಲಾದರೂ ಬದಲಾವಣೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

basanagouda-patil-yatnal

ಬಿಜೆಪಿ ಉಳಿಯಬೇಕು ಎಂದರೆ ಮೇ 2 ರ ನಂತರ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ತೆಗೆಯಲೇಬೇಕು.

ಇಲ್ಲ ಅಂದರೆ ಪಕ್ಷ ಉಳಿಯೋದಿಲ್ಲ ಎಂದು ಎಂದು ಮಾರ್ಮಿಕವಾಗಿ ನುಡಿದರು.

ಏಪ್ರಿಲ್ 17 ರ ನಂತರ ಶಾಸಕರು ಸಚಿವರು ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ ಎಂದು ತಿಳಿಸಿದ ಯತ್ನಾಳ್, ಸೂರ್ಯ ಚಂದ್ರ ಇರುವವರೆಗೆ ಯಡಿಯೂರಪ್ಪನವರೇ ಸಿಎಂ ಅಂದ್ರೆ ಏನರ್ಥ?

ಯಡಿಯೂರಪ್ಪ ಫ್ಯಾಮಿಲಿಗೇನಾದರೂ ರಾಜ್ಯವನ್ನು ಬರೆದುಕೊಟ್ಟಿದ್ದಾರಾ.. ಎಂದು ಪ್ರಶ್ನೆ ಮಾಡಿದರು.

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd