ಏನೇ ಸಮಸ್ಯೆ ಇದ್ರೂ ಸಿಎಂ ಬಳಿ ಮಾತಾಡಬೇಕು – ಬೊಮ್ಮಾಯಿ
ಬೆಂಗಳೂರು : ವಾಣಿಜ್ಯ ವ್ಯವಹಾರ ನಿಯಮಗಳ ಪ್ರಕಾರ ಸಿಎಂಗೆ ಪರಮಾಧಿಕಾರ ಇರುತ್ತದೆ. ಗ್ರಾಮೀಣಾಭಿವೃದ್ಧಿ ಸಾಕಷ್ಟು ಕೆಲಸ ಆಗಬೇಕು ಅನ್ನೋ ಕೂಗು ಅಸೆಂಬ್ಲಿಯಲ್ಲಿ ಶಾಸಕರದ್ದು ಇತ್ತು. ಕೋವಿಡ್ ನೆರೆ ಕಾರಣದಿಂದ ಆಗಿರಲಿಲ್ಲ. ಆದ್ರೆ ಈಗ ಹಣಕಾಸಿನ ಪರಿಸ್ಥಿತಿ ಸರಿಯಾದ ಮೇಲೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬಿಎಸ್ ವೈ ವಿರುದ್ಧ ಈಶ್ವರಪ್ಪ ದೂರು ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು ಸಿಎಂ ಹಣಕಾಸಿನ ಸಚಿವರು. ಹಾಗಾಗೀ ಅನುದಾನ ಬಿಡುಗಡೆ ಮಾಡಿದ್ದಾರೆ. ಇದನ್ನು ನಮ್ಮ ಸರ್ಕಾರದ ಒಳಗಡೆ ಬಗೆಹರಿಸಬೇಕಿತ್ತು. ಅದನ್ನು ರಾಜ್ಯಪಾಲರ ಅಂಗಳಕ್ಕೆ ಹಾಕಬಾರದಿತ್ತು. ಏನೇ ಸಮಸ್ಯೆ ಇದ್ರೂ ಸಿಎಂ ಬಳಿ ಮಾತಾಡಬೇಕು. ಈಗಾಗಲೇ ಈಶ್ವರಪ್ಪ ಹೇಳಿದ್ದಾರೆ. ಸಿಎಂ ಜತೆ ಕೂತು ಚರ್ಚೆ ಮಾಡ್ತೇನೆ ಅಂತ ಹೇಳಿದ್ದಾರೆ. ಅದನ್ನು ಆದಷ್ಟು ಬೇಗ ಮಾಡಿದ್ರೆ ಒಳ್ಳೆಯದು. ಸಿಎಂ ಜತೆ ಕೂತು ಬಗೆಹರಿಸೋದು ಸೂಕ್ತ. ಹೊಸ ಪದ್ದತಿ ಶುರು ಮಾಡುವುದು ಬೇಡ ಎಂದಿದ್ದಾರೆ.
ವೈದ್ಯನಿಗೆ ಚಪ್ಪಳಿಯಿಂದ ಹೊಡೆದ ಮಹಿಳೆ… ವಿಡಿಯೋ ವೈರಲ್..!
ಸಿಡಿ ಕೇಸ್ – SIT ಬದಲು CBIಗೆ ಕೊಟ್ಟಿದ್ರೆ ಸತ್ಯ ಹೊರ ಬರ್ತಿತ್ತು.
ಸಿಎಂ ರಾಜೀನಾಮೆ ಕೊಡಲಿ… ಇಲ್ಲಾ ಈಶ್ವರಪ್ಪನವರನ್ನ ಕ್ಯಾಬಿನೆಟ್ ನಿಂದ ತಗೆದು ಹಾಕಲಿ – ಡಿಕೆಶಿ








