Bazball Brand Cricket | ಬ್ಯಾಜ್ಬಾಲ್ ಬಗ್ಗೆ ಅಶ್ವಿನ್ ಹೇಳಿದ್ದೇನು..?
ಇಂಗ್ಲೆಂಡ್ ಕ್ರಿಕೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬ್ಯಾಜ್ಬಾಲ್ ಮೇಲೆ ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ರವೀಂದ್ರನ್ ಅಶ್ವಿನ್ ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಬ್ಯಾಜ್ಬಾಲ್ ಅಂದ್ರೆ ಟೆಸ್ಟ್ ಕ್ರಿಕೆಟ್ ಅನ್ನ ಬೋರ್ ಹಿಡಿಸದೇ ಆಡೋದು.
ಮೈದಾನಕ್ಕೆ ಬಂದಿರುವ ಪ್ರೇಕ್ಷಕರನ್ನು ಮನರಂಜಿಸುತ್ತಾ ಎದುರಾಳಿಗಳ ಮೇಲೆ ಮೇಲುಗೈ ಸಾಧಿಸೋದೇ ಆಗಿದೆ.
ಈ ಬಗ್ಗೆ ಟೀಂ ಇಂಡಿಯಾದ ಹಿರಿಯ ಸ್ಪನ್ನರ್ ರವಿಚಂದ್ರನ್ ಅಶ್ವಿನ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಅಶ್ವಿನ್, ನೋಡೋಕೆ ಇದು ಚೆನ್ನಾಗಿಯೇ ಇರುತ್ತದೆ.
ಆದ್ರೆ ಒಬ್ಬ ಬೌಲರ್ ಆಗಿ ಕ್ರೀಡೆ ಎಲ್ಲಿಗೆ ಹೋಗುತ್ತೋ ಅನ್ನೋ ಆಂದೋಳನ ಕಾಡುತ್ತಿದೆ.

ನನಗೆ ತಿಳಿದಂತೆ ಇಂಗ್ಲೆಂಡ್ ನಲ್ಲಿನ ಪಿಚ್ ಗಳು, ಬಾಲ್ ಗಳು, ಇಂಗ್ಲೆಂಡ್ ಕೂಡ ಇದೇ ರೀತಿಯ ಕ್ರಿಕೆಟ್ ಆಡೋದಕ್ಕೆ ಸಜ್ಜಾಗಿವೆ ಅನಿಸುತ್ತಿದೆ.
ಬ್ಯಾಜ್ಬಾಲ್ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಟೆಸ್ಟ್ ಕ್ರಿಕೆಟ್ ಅನ್ನೋದು ಕಳೆದ ನೂರು ವರ್ಷಗಳ ತನ್ನ ಸೊಬಗು ಕಳೆದುಕೊಳ್ಳದೇ ಹಾಗೇಯೇ ಉಳಿದಿದೆ.
ಆದ್ರೆ ಬ್ಯಾಜ್ಬಾಲ್ ರೀತಿಯ ಕ್ರಿಕೆಟ್ ಆಡಿದ್ರೆ ಟೆಸ್ಟ್ ಎಷ್ಟು ವರ್ಷಗಳ ಕಾಲ ಇರುತ್ತದೆ ಅನ್ನೋದು ಚರ್ಚನೀಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ಇನ್ನು ಬ್ಯಾಜ್ಬಾಲ್ ಕ್ರಿಕೆಟ್ ಬಗ್ಗೆ ಮಾತನಾಡಿದ ಬೆನ್ ಸ್ಟೋಕ್ಸ್ ತಂಡ ಯಾವುದಾದ್ರೂ ನಮ್ಮ ಆಟದ ತಂತ್ರ ಬದಲಾಗುವುದಿಲ್ಲ ಎಂದಿದ್ದಾರೆ.