ಬೆಂಗಳೂರು: ಇಷ್ಟು ದಿನ ಎಲ್ಲೇ ಕೊರೊನಾ ಪಾಸಿಟಿವ್ ಕೇಸ್ ಗಳು ಕಂಡುಬಂದರು ಅಲ್ಲಿ ಬಿಬಿಎಂಪಿ ಇಲಾಖೆಯ ವತಿಯಿಂದ ಸೀಲ್ ಡೌನ್ ಮಾಡಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ ಇದರಿಂದಾಗಿ ಸೀಲ್ ಡೌನ್ ಮಾಡಲಾದ ಮನೆಮಂದಿಯನ್ನು ಸಮಾಜದಲ್ಲಿ ನೊಡುವ ರೀತಿಯೇ ಬದಲಾಗುತ್ತೆ ಅನ್ನುವುದು ಹಲವರ ಬೇಸರಕ್ಕೆ ಕಾರಣವಾಗಿದೆ. ಆದರೆ ಈ ಕ್ರಮವನ್ನು ಕೈ ಬಿಡುವ ಸುಳಿವನ್ನು ಸದ್ಯ ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಅವರು ನೀಡಿದ್ದಾರೆ. ಬಿಬಿಎಂಪಿ ಕೌನ್ಸಿಲ್ ಸಭೆ ಬಳಿಕ ಮಂಜುನಾಥ್ ಪ್ರಸಾದ್ ಅವರು ಈ ಕುರಿತಾಗಿ ಮಾತನಾಡಿದ್ದು, ಸೀಲ್ ಡೌನ್ ಏರಿಯಾದ ಜನರು ಮುಜುಗರಕ್ಕೆ ಒಳಪಡುತ್ತಿರುವ ಹಿನ್ನಲೆ ನಮಗೆ ಹಲವಾರು ದೂರುಗಳು ಬಂದಿವೆ. ಮನೆಗಳ ಸೀಲ್ ಡೌನ್ ಮಾಡೋದು ಸರಿಯಿಲ್ಲ ಅಂತಾ ಜನ ಹೇಳಿದ್ದಾರೆ. ಹಾಗಾಗಿ ಈ ಮನವಿಯನ್ನ ನಾನು ರಾಜ್ಯ ಸರ್ಕಾರದ ಮುಂದೆ ಇಡುತ್ತೇನೆ. ರಾಜ್ಯ ಸರ್ಕಾರ ಯಾವ ತೀರ್ಮಾನ ಕೈಗೊಳ್ಳುತ್ತೋ ಕಾದು ನೋಡಬೇಕಿದೆ. ಸರ್ಕಾರದ ಆದೇಶದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ ’99 ಸ್ಟೋರ್’!
49 ರೂ.ಗೆ ಊಟ, ಜೊತೆಗೆ ಫ್ರೀ ಡೆಲಿವರಿ: ಆನ್‌ಲೈನ್ ಫುಡ್ ಆರ್ಡರ್ ಟ್ರೆಂಡ್ ಬದಲಿಸಿದ ಸ್ವಿಗ್ಗಿ '99 ಸ್ಟೋರ್'! ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಊಟ ಆರ್ಡರ್...








