ಶನಿವಾರ, ಭಾನುವಾರವೂ ‘ತರಗತಿ ಓಪನ್’
ಬೆಂಗಳೂರು : ಕೊರೊನಾ ಸೋಂಕಿನಿಂದಾಗಿ ರಾಜ್ಯದಲ್ಲಿ ಶಾಲೆಗಳು ತಡವಾಗಿ ಆರಂಭವಾಗಿವೆ.
ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ. ಇದನ್ನು ಸರಿದೂಗಿಸಲು ಶನಿವಾರ, ಭಾನುವಾರವೂ ತರಗತಿಗಳನ್ನು ನಡೆಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ನಾಳೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ 1 ರಿಂದ 5ನೇ ತರಗತಿಗಳನ್ನು ಪುನರಾರಂಭ ಕುರಿತಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ.
ಕೊರೊನಾ ಕಾರಣದಿಂದಾಗಿ ಶಾಲೆ ತಡವಾಗಿ ಆರಂಭವಾಗುತ್ತಿರುವುದರಿಂದ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ.
ಹೀಗಾಗಿ ಶನಿವಾರ, ಭಾನುವಾರವೂ ತರಗತಿ ನಡೆಸೋ ಬಗ್ಗೆ ಚಿಂತನೆ ಇದೆ ಎಂದು ಸಚಿವರು ತಿಳಿಸಿದರು.
ಇನ್ನು ಇದೇವೇಳೆ ಪಠ್ಯ ಕ್ರಮ ಕಡಿತಗೊಳಿಸುವ ಬಗ್ಗೆ ಮಾತನಾಡಿ, ಪಠ್ಯ ಕ್ರಮ ಕಡಿತದ ಕುರಿತಂತೆ ಯಾವುದೇ ನಿರ್ಧಾರ ಕೈಗೊಳ್ಳುವಂತ ಚಿಂತನೆ ಇಲ್ಲ.
ಪಠ್ಯ ಕ್ರಮ ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸೋದಕ್ಕಾಗಿ ಶನಿವಾರ ಹಾಗೂ ಭಾನುವಾರವೂ ತರಗತಿ ನಡೆಸೋ ಚಿಂತನೆಯಿದೆ.
ಆ ಬಗ್ಗೆ ಶೀಘ್ರವೇ ಸಿಎಂ ನೇತೃತ್ವದಲ್ಲಿ ನಡೆಯಲಿರುವಂತ ಸಭೆಯಲ್ಲಿ ನಿರ್ಧಾರವನ್ನು ಪ್ರಕಟಿಸಲಾಗುತ್ತದೆ ಎಂದರು.









