ಮನುಷ್ಯ ಆಶಾವಾದಿ ಆಗಿರಬೇಕು, ಹೀಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದೊರು ನಾವು – ಬಿಸಿ ಪಾಟೀಲ್
ಹಾವೇರಿ : ಹಿರೆಕೇರೂರಿನ ನಿವಾಸದಲ್ಲಿ ಶಾಸಕ , ಮಾಜಿ ಸಚಿವ ಬಿಸಿ ಪಾಟೀಲ್ ಅವರು ನೂತನ ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಮಾದ್ಯಮಗಳಿಗೆ ಮುಖ್ಯಮಂತ್ರಿಗಳು ಹೇಳಿದ್ದಾರೆ. ಒಂದು ವಾರ ಆಗಿದೆ ಹೊಸ ಮುಖ್ಯಮಂತ್ರಿಗಳು ನೇಮಕ ಆಗಿ. ಕೋವಿಡ್ , ಪ್ರವಾಹ ಇರೊದ್ರಿಂದ ಬೇಗನೆ ರಚನೆ ಆಗಬೇಕು.ಮನುಷ್ಯ ಆಶಾವಾದಿ ಆಗಿರಬೇಕು. ಹೀಗಾಗಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದೊರು ನಾವು. ಪಕ್ಷ ನಮ್ಮನ್ನು ಚನ್ನಾಗಿ ನಡಸಿಕೊಂಡಿದೆ ಮುಂದೆಯೂ ಚನ್ನಾಗಿ ನಡೆಸಿಕೊಳ್ತಾರೆ ಎನ್ನುವ ಭರವಸೆ ಇದೆ. ಯಡಿಯೂರಪ್ಪನವರು ಮೊನ್ನೆನೆ ಹೇಳಿದ್ದಾರೆ. ಅವರಿಂದಾನೆ ರ‍್ಕಾರ ಬಂದಿದೆ ಎಂದು ಯಡಿಯೂರಪ್ಪನವರೆ ಹೇಳಿದಾರೆ ಎಂದು ತಮಗೆ ಸಚಿವ ಸ್ಥಾನ ಸಿಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಸಚಿವ ಸ್ಥಾನದಿಂದ ಕೆಲವರಿಗೆ ಕೊಕ್ ನೀಡುವ ವಿಚಾರವಾಗಿ ಮಾತನಾಡಿರುವ ಅವರು ಹಿರಿಯರ ಬಗ್ಗೆ ಮಾತಾಡುವಷ್ಟು ನಾವು ದೊಡ್ಡೊರು ಅಲ್ಲಾ. ಪಕ್ಷದ ವರಿಷ್ಠರು ಇದಾರೆ ಅವರೆ ಇದನ್ನೆಲ್ಲಾ ಸರಿಪಡಿಸ್ತಾರೆ. ಸಚಿವಸ್ಥಾನಿಗಳ ಆಕಾಂಕ್ಷೆ ದೊಡ್ಡದು ಇದೆ . ಹಾಂಗಾದ್ರ ಹಿಂಗಾದ್ರೆ ಅನ್ನೊದಕ್ಕೆ ಉತ್ತರ ಕೊಡೊದಕ್ಕೆ ಆಗೊಲ್ಲಾ. ಪಕ್ಷ ದೊಡ್ಡದು ಇದೆ ಎಲ್ಲರನ್ನೂ ಗೌರವಿಸ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದಿದ್ದಾರೆ..
ಮೈಲಾರ ದಲ್ಲಿ ರ‍್ಮರ‍್ಶಿಗಳ ಹೇಳಿಕೆ ಕುರಿತು ಪ್ರತಿಕ್ರೀಯೆ ನೀಡಿದ ಅವರು ಅದನ್ನು ಅವರಿಗೆ ಕೇಳಿ. ರಾಜಕೀಯ ಭವಿಷ್ಯ ನುಡಿಯಬೇಕಾದೋರು ರಾಜ್ಯದ ಪ್ರಜೆಗಳೆ ಹೊರತು ಯಾವುದೆ ರ‍್ಮರ‍್ಶಿಗಳು ಹಾಗೂ ಸ್ವಾಮೀಗಳು ಅಲ್ಲಾ. ಪ್ರಜಾಪ್ರಭುತ್ವ ವ್ಯವಸ್ಥೆ ಇದು ಅಧಿಕಾರದಲ್ಲಿ ಯಾರು ಎಷ್ಟು ದಿನ ಇರುತ್ತಾರೆ ಅನ್ನೋದು ಅವರು ನರ‍್ಧಾರ ಮಾಡ್ತಾರೆ. ಅವರು ಡಿಸೈಡ್ ಮಾಡಿ ಪಕ್ಷವನ್ನು ಅಧಿಕಾರಕ್ಕೆ ರ‍್ತಾರೆ. ಹಾಗೇ ಯಾರು ಮುಂದುವರಿಬೇಕು ಅನ್ನೋದು ಪಕ್ಷ ಹಾಗೂ ವರಿಷ್ಠರು ತರ‍್ಮಾನ ಮಾಡ್ತಾರೆ. ಅದರ ಮೇಲೆ ಹೋಗ್ತಾರೆ ಹೊರತು ಭವಿಷ್ಯದವಾಣಿ ಮೇಲೆ ಹೋಗೊಲ್ಲಾ. ಉದಾಹಾರಣೆಗೆ ಹೇಳಬೇಕು ಎಂದರೆ ನನಗೆ ರಾಜಕೀಯಕ್ಕೆ ಬರಲೇಬೇಡಾ ಎಂದಿದ್ದರು. ಬಂದರೆ ಸಕ್ಸಸ್ ಆಗೊಲ್ಲಾ ಎಂದು ದೊಡ್ಡ ಗುರುಗಳು ಹೇಳಿದ್ದರು. ಈಗ ಅದೆಲ್ಲಾ ಸುಳ್ಳಾಗಿಲ್ವಾ,ಕೊರೊನಾ ಬಗ್ಗೆ ಭವಿಷ್ಯ ಹೇಳೊಕೆ ಆಗುತ್ತಾ ಅದರ ಬಗ್ಗೆ ಹೇಳಲಿ ನೋಡೊಣ. ಸುಮ್ಮನೆ ಯಾರಾರೋ ಹೇಳ್ತಾರಂತೆ ಅದಕ್ಕೇಲ್ಲಾ ಆದ್ಯತೆ ಕೊಡೊದು ಸರಿ ಅಲ್ಲಾ ಎಂದಿದ್ದಾರೆ.
ಇನ್ನೂ ಯಾವ ಖಾತೆ ಕೊಟ್ಟರು ಅದನ್ನು ನಿಭಾಯಿಸುವ ಅಸಕ್ತಿ ಇದೆ, 25 ರ‍್ಷಗಳಿಂದ ಅಧಿಕಾರಿ ಆಗಿ ಕೆಲಸ ಮಾಡಿದ್ದೇನೆ, ಹೀಗಾಗಿ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದು ಪರೋಕ್ಷವಾಗಿ ಗೃಹ ಖಾತೆಯ ಬಗ್ಗೆ ಆಶೆಯನ್ನು ವ್ಯಕ್ತಪಡಿಸಿದ್ದಾರೆ ಬಿಸಿ ಪಾಟೀಲ್ ಅವರು.








