“ರೈತ ಸಿರಿ ಯೋಜನೆ” ಯಡಿ ಒಟ್ಟು 9.85 ಕೋಟಿ ರೂ. ಪ್ರೋತ್ಸಾಹಧನ ಪಾವತಿ
ಬೆಂಗಳೂರು : 2021-22ನೇ ಸಾಲಿನಲ್ಲಿ ಬೆಳೆ ಸಮೀಕ್ಷೆ ಆಧಾರದ ಮೇಲೆ “ರೈತ ಸಿರಿ ಯೋಜನೆ”ಯಡಿ ಮುಂಗಾರು ಹಂಗಾಮಿನಲ್ಲಿ 27888 ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲಾಗಿದ್ದು, ಇದುವರೆಗೆ 13758 ರೈತರಿಗೆ ಒಟ್ಟು 9.85 ಕೋಟಿ ರೂ. ಪ್ರೋತ್ಸಾಹಧನ ಪಾವತಿಸಲಾಗಿದ್ದು, ಉಳಿದ ರೈತರಿಗೆ ಪ್ರೋತ್ಸಾಹಧನ ಪಾವತಿ ಪ್ರಗತಿಯಲ್ಲಿರುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಕೃಷಿ ಸಚಿವರು, ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ “ರೈತ ಸಿರಿ ಯೋಜನೆ”ಯಡಿ ಸಾವಯವ ಮತ್ತು ಸಾಂಪ್ರದಾಯಿಕವಾಗಿಬೆಳೆಯುವ ಸಿರಿಧಾನ್ಯಗಳಾದ ನವಣೆ,ಹಾರಕ,ಸಾಮೆ,ಕೊರಲೆ, ಬರಗು ಮತ್ತು ಊದು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ ರೂ.10 ಸಾವಿರಗಳಂತೆ ಗರಿಷ್ಠ ಎರಡು ಹೆಕ್ಟೇರ್ ಗೆ ಸೀಮಿತವಾಗುವಂತೆ ಡಿಬಿಟಿ ಮೂಲಕ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದಿದ್ದಾರೆ.