ಕರ್ನಾಟಕ ಬೀಜ ನಿಗಮ ತರಕಾರಿ ಬೀಜಗಳನ್ನೂ ಉತ್ಪಾದಿಸಲಿ:ಬಿ.ಸಿ.ಪಾಟೀಲ್

1 min read

ಕರ್ನಾಟಕ ಬೀಜ ನಿಗಮ ತರಕಾರಿ ಬೀಜಗಳನ್ನೂ ಉತ್ಪಾದಿಸಲಿ : ಬಿ.ಸಿ.ಪಾಟೀಲ್

ಬೆಂಗಳೂರು : ಕರ್ನಾಟಕ ರಾಜ್ಯ ಬೀಜ ನಿಗಮ ತಳಿವರ್ಧಿತ ಬಿತ್ತನೆ ಬೀಜಗಳ ಜೊತೆಗೆ ರೈತರಿಗೆ ಲಾಭದಾಯಕವಾಗುವ ತರಕಾರಿ ಬೀಜಗಳನ್ನೂ ಉತ್ಪಾದಿಸಲಿ ಎಂದು ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದ್ದಾರೆ.
ಹೆಬ್ಬಾಳದ ಕರ್ನಾಟಕ ಬೀಜ ನಿಗಮದಲ್ಲಿ ಬೀಜ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲಾ ಉಪವ್ಯವಸ್ಥಾಪಕ ನಿರ್ದೇಶಕರೊಂದಿಗೆ ಬಿ.ಸಿ.ಪಾಟೀಲ್ ಸಭೆ ನಡೆಸಿದರು.

ರೈತರಿಗೆ ಗುಣಮಟ್ಟದ ಬಿತ್ತನೆಬೀಜ ಪೂರೈಸುವುದರ ಜೊತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಗುಣಮಟ್ಟದ ಬೀಜ ಉತ್ಪಾದನೆಯ ಲಾಭತರುವ ನಿಗಮವಾಗಬೇಕೆಂದು ಬೀಜ ನಿಗಮ ರೈತರಿಗೆ ಬರಿ ಬಿತ್ತನೆ ಬೀಜವನ್ನು ಪೂರೈಸುವ ಕೆಲಸವನ್ನಷ್ಟೇ ಮಾಡಬಾರದು. ಬೀಜ ನಿಗಮವು ತಳಿವರ್ಧಿತ ಬಿತ್ತನೆ ಬೀಜವನ್ನು ಉತ್ಪಾದಿಸುವ ಜೊತೆಗೆ ರೈತರಿಗೆ ಲಾಭ ತರುವ ಗುಣಮಟ್ಟದ ಬಿತ್ತನೆ ಬೀಜವನ್ನು ಸಹ ಉತ್ಪಾದಿಸುವ ನಿಗಮವಾಗಬೇಕು. ಆ ಮೂಲಕ ನಿಗಮ ದೇಶದಲ್ಲಿಯೇ ಲಾಭದಾಯಕ ನಿಗಮವಾಗಬೇಕು.ರೈತರ ಹಿತದೃಷ್ಟಿಯಿಂದ ತರಕಾರಿ ಬಿತ್ತನೆ ಬೀಜಗಳನ್ನು ಸಹ ರಾಜ್ಯ ಬೀಜ ನಿಗಮ ಉತ್ಪಾದಿಸಿ ಮಾರಾಟ ಮಾಡಬೇಕು. ಇದಕ್ಕೆ ಅಗತ್ಯವಾದ ಕೌಶಲ್ಯ ತರಬೇತಿ ವೃತ್ತಿಪರತೆಯನ್ನು ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕರು ಹೊಂದಬೇಕು. ಆ ಮೂಲಕ ಕರ್ನಾಟಕ ತೈಲ ನಿಗಮದಂತೆ ಬೀಜ ನಿಗಮವು ಸಹ ಲಾಭದಾಯವಾಗಬೇಕೆಂದು ಬಿ.ಸಿ.ಪಾಟೀಲ್ ಕರೆ ನೀಡಿದರು.

ಸ್ವರ್ಣ ಭಾರತಿ ಸಹಕಾರ ಬ್ಯಾಂಕಿನ ಮೊದಲ ATM ಉದ್ಘಾಟನೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd