Beast | ಆ ಟಿಕೇಟ್ ತಗೊಂಡ್ರೆ ಒಂದು ಲೀಟರ್ ಪ್ರೆಟೋಲ್ ಉಚಿತ

1 min read
beast-movie-vijay-fans-and-theatres-offered-free-cost-petrol saaksha tv

Beast | ಆ ಟಿಕೇಟ್ ತಗೊಂಡ್ರೆ ಒಂದು ಲೀಟರ್ ಪ್ರೆಟೋಲ್ ಉಚಿತ

ತಮಿಳಿನ ಸ್ಟಾರ್ ಹೀರೋ ದಳಪತಿ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ.

ಇವತ್ತು ಸಿನಿಮಾ ರಿಲೀಸ್ ಇದ್ದರೇ ಕಳೆದ ಒಂದು ವಾರದಿಂದಲೇ ಬೀಸ್ಟ್ ಹವಾ ಜೋರಾಗಿತ್ತು.

ಪ್ರತಿ ಥಿಯೇಟರ್ ಮುಂದೆ ವಿಜಯ್ ಅಭಿಮಾನಿಗಳ ಸಂಭ್ರಮ ಮಾಮೂಲಿಯಾಗಿಲ್ಲ.

ಇಂದು ಬೆಳಗ್ಗೆಯಿಂದಲೇ ಚಿತ್ರಮಂದಿರಗಳಲ್ಲಿ ವಿಜಯ್ ಅಭಿಮಾನಿಗಳು ಬೃಹತ್ ಕಟೌಟ್ ಗಳನ್ನು ಹಾಕಿ, ಹಾಲಿನ ಅಭಿಷೇಕ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಬೀಸ್ಟ್ ಚಿತ್ರ ವೀಕ್ಷಿಸಲು ಪ್ರೇಕ್ಷಕರಿಗೆ ಥಿಯೇಟರ್ ಮಾಲೀಕರು ಬಂಪರ್ ಆಫರ್ ಘೋಷಿಸಿದ್ದಾರೆ.

beast-movie-vijay-fans-and-theatres-offered-free-cost-petrol saaksha tv

ವಿರುಧ್ ನಗರದ ರಾಜ ಲಕ್ಷ್ಮಿ ಮತ್ತು ಅಮೃತರಾಜ್ ಥಿಯೇಟರ್ಗಳು ಮೊದಲ ಶೋ ನೋಡುವವರಿಗೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿವೆ.

ಆದರೆ, ಅದಕ್ಕೂ ಒಂದು ಷರತ್ತು ಹಾಕಿದ್ದಾರೆ. ಎಫ್ಡಿಎಫ್ಎಸ್ (ಫಸ್ಟ್ ಡೇ ಫಸ್ಟ್ ಶೋ) 5 ಟಿಕೆಟ್ ಖರೀದಿಸುವವರಿಗೆ ಮಾತ್ರ ಈ ಆಫರ್ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಇಲ್ಲಿ FDFS ಟಿಕೆಟ್ ಬೆಲೆ ರೂ. 500 ಇದ್ದರೇ ಇತರೆ ಚಿತ್ರಮಂದಿರಗಳಲ್ಲಿ ರೂ. 400 ರಿಂದ ರೂ. 300 ರು. ಇದೆ. ಚೆನ್ನೈನ ಹಲವೆಡೆ ವಿಜಯ್ ಅಭಿಮಾನಿಗಳು ಪ್ರೇಕ್ಷಕರಿಗೆ ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡುತ್ತಿದ್ದಾರೆ.

ಮಕ್ಕಳ್ ಇಯ್ಯಕ್ಕಂ ಪರವಾಗಿ ಬೀಸ್ಟ್ ಸಿನಿಮಾ ನೋಡಿದ ಅಭಿಮಾನಿಗಳೆಲ್ಲ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡುತ್ತಿದ್ದಾರೆ. beast-movie-vijay-fans-and-theatres-offered-free-cost-petrol

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd