Belgaum | ಕೃಷ್ಣಾನದಿಯಲ್ಲಿ ಮುಳುಗಿ ಯುವಕ ಸಾವು
ಬೆಳಗಾವಿ : ಕೃಷ್ಣಾ ನದಿಯಲ್ಲಿ ನೀರು ತರಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹಾಳ್ಯಾಳ್ ಗ್ರಾಮದಲ್ಲಿ ನಡೆದಿದೆ.
23 ವರ್ಷದ ಸಾಗರ್ ರಾಜು ಹೊಣಕಟ್ಟೆ ಮೃತ ಯುವಕನಾಗಿದ್ದು, ಈತ ಅಥಣಿ ಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಶೋಧ ಕಾರ್ಯ ಮುಂದುವರೆಸಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಇದೆ ಸ್ಥಳದಲ್ಲಿ ಹಳ್ಳಾಳ ಗ್ರಾಮದ 4 ಯುವಕರು ನೀರಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದರು.








