ಬಳ್ಳಾರಿ : ಬಳ್ಳಾರಿ ಜಿಲ್ಲೆಯಲ್ಲಿ ಕೊವಿಡ್ ಆಸ್ಪತ್ರೆಗಳಲ್ಲಿ ಬೆಡ್ ಗಳೇ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಇತ್ತ ಬಳ್ಳಾರಿಯ ವಿಮ್ಸ್ ಅಸ್ಪತ್ರೆಯ ಮತ್ತೊಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿದೆ. ವಿಮ್ಸ್ ಆಸ್ಪತ್ರೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಕೊರೊನಾ ಸೋಂಕಿತನನ್ನ ನೆಲದ ಮೇಲೆಯೇ ಮಲಗಿಸಿದ್ದಾರೆ. ಕೊವಿಡ್ ಸೋಂಕಿತರು ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಬೆಡ್ ಗಾಗಿ ಅಲೆದು ಅಲೆದು ರೋಗಿಗಳು ಪರದಾಡುತ್ತಿದ್ದಾರೆ.
ನಿನ್ನೆಯಿಂದ ಬೆಡ್ ಸಿಗದೇ ತಾಳೂರು ರಸ್ತೆ ಮಹಾನಂದ ಕೊಟ್ಟಂ ನಿವಾಸಿ ಬಸಿರೆಡ್ಡಿ ಎಂಬ ಕೊರೊನಾ ಸೋಂಕಿತರೊಬ್ಬರು ನೆಲದ ಮೇಲೆಯೇ ಮಲಗಿದ್ದಾರೆ. ಆದ್ರೆ ಜಿಲ್ಲಾಡಳಿತ ಮಾತ್ರ ಬೆಡ್ ಗಳ ಕೊರತೆ ಇಲ್ಲ ಅಂತ ಹೇಳುತ್ತೆ.. ಇಲ್ಲಿ ನೊಡಿದ್ರೆ ಬೆಡ್ ಕೊರತೆಯಿಂದ ಸೋಂಕಿತ ನೆಲದ ಮೇಲೆಯೇ ಮಲಗುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ 6 ಕೊವಿಡ್ ಆಸ್ಪತ್ರೆಗಳಿದ್ದರೂ ಎಲ್ಲೂ ಬೆಡ್ ಗಳ ವ್ಯವಸ್ಥೆ ಇಲ್ಲದೇ ಇರುವುದು ಮಾತ್ರ ನಿಜಕ್ಕೂ ಬೇಸರದ ವಿಚಾರವೇ ಆಗಿದೆ.