ಹಾಸನ: ದಿನೇ ದಿನೇ ಜನಪ್ರತಿನಿಧಿಗಳಿಗೆ ಕೊರೊನಾ ವಕ್ಕರಿಸುತ್ತಿರುವ ಪ್ರಕರಣಳು ಹೆಚ್ಚಾಗುತ್ತಲೇ ಇದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೊರೊನಾ ಮಹಾಮಾರಿ ತಗುಲಿತ್ತು. ಇದರ ಬೆನ್ನಲ್ಲೇ ಇದೀಗ ಹಾಸನದ ಬೇಲೂರು ಜೆಡಿಎಸ್ ಶಾಸಕ ಕೆ.ಎಸ್. ಲಿಂಗೇಶ್ ಅವರಿಗೆ ಕೋವಿಡ್ ದೃಢಪಟ್ಟಿದೆ.![]()
ಸೋಂಕು ದೃಢವಾದ ಹಿನ್ನೆಲೆ ಕೊರೊನಾ ಆಸ್ಪತ್ರೆಯಲ್ಲಿ ಲಿಂಗೇಶ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಮಾಡಿರುವ ಸಾಸಕರು ಶಶೀಘ್ರವಾಗಿ ಗುಣಮುಖನಗಿ ಬರುವೆ. ಪ್ರಾರ್ಥಮಿಕ ಸಂಪರ್ಕಕ್ಕೆ ಬಂದಿದ್ದವರು ಪರೀಕ್ಷೆಗೆ ಒಳಪಡಿ. ಕುಟುಂಬದ ಸದಸ್ಯರು ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ. ಯಾವುದೇ ಸಮಸ್ಯೆ, ಕೆಲಸ ಇದ್ದರೂ ಮೊಬೈಲ್ ಮೂಲಕ ಸಂಪರ್ಕಿಸಿದರೆ ಸ್ಪಂದಿಸುತ್ತೇನೆ ಎಂದು ತಿಳಿಸಿದ್ದಾರೆ. 








