BENGALURU ಬೆಂಗಳೂರಿನಲ್ಲಿ 14,476 ಮಂದಿಗೆ ಕೊರೊನಾ ದೃಢ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕೊರೊನಾ ಸ್ಫೋಟವಾಗಿದೆ. ಮಂಗಳವಾರ ನಗರದಲ್ಲಿ 14,476 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಮರಣದ ಪ್ರಮಾಣವು ಕೂಡ ಹೆಚ್ಚಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ನಗರದ ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರು ದಕ್ಷಿಣದಲ್ಲಿ 2,798 ಜನರಿಗೆ ಕೋವಿಡ್ ಹಬ್ಬಿದೆ.
ಪಶ್ಚಿಮದಲ್ಲಿ 2,275, ಪೂರ್ವದಲ್ಲಿ 2,148, ಬೊಮ್ಮನಹಳ್ಳಿಯಲ್ಲಿ 1,519, ದಾಸರಹಳ್ಳಿಯಲ್ಲಿ 438, ಮಹದೇವಪುರದಲ್ಲಿ 1,482, ಆರ್.ಆರ್.ನಗರದಲ್ಲಿ 880, ಯಲಹಂಕದಲ್ಲಿ 839, ಅನೇಕಲ್ನಲ್ಲಿ 457, ಪೂರ್ವ ತಾಲೂಕು 116, ಉತ್ತರ ತಾಲೂಕು 217, ದಕ್ಷಿಣ ತಾಲೂಕು 212 ಪ್ರಕರಣಗಳು ಪತ್ತೆಯಾಗಿವೆ.
ಇದಲ್ಲದೆ ನಗರದ ಹೊರವಲಯದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, 1,095 ಜನರಿಗೆ ಸೋಂಕು ತಗುಲಿದೆ.