ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 8 ಮಂದಿ ಬಂಧನ…
ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ಮಾಹಿತಿ ಬೇರೆಗೆ ಬೆಂಗಳೂರು ಪೊಲೀಸರು ದಾಳಿ ನಡೆಸಿ ಬಾಂಗ್ಲಾ ದೇಶದ ಮೂಲದವರು ಎನ್ನಲಾದ 8 ಮಂದಿಯನ್ನ ಬಂಧಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿದ್ದಾರೆ.
ಮಾಧ್ಯಮಗಳಿ ಮಾತನಾಡಿದ ಅವರು “ನಮಗೆ ಬಂದ ಮಾಹಿತಿ ಆಧಾರದಲ್ಲಿ ಕೆಂಗೇರಿ ಮತ್ತು ಸೊಲದೇವನಹಳ್ಳಿಯಲ್ಲಿ ವಿದೇಶಿಯರು ಇದ್ದಾರೆ ಎಂಬ ಮಾಹಿತಿ ಸಿಕ್ಕಿತ್ತುಬ ಬಾಡಿಗೆ ಮನೆ ಪಡೆದು ವೇಶ್ಯಾವಾಟಿ ದಂಧೆ ನಡೆಸ್ತಿದ್ದ ಮಾಹಿತಿ ಸಿಕ್ಕಿತ್ತು. ಪ್ರಾಥಮಿಕವಾಗಿ ವಿಚಾರಣೆ ಮಾಡಿದ ವೇಳೆ ಭಾರತದ ನಿವಾಸಿಗಳು ಅಂತ ಹೇಳ್ತಿದ್ದಾರೆ. ಆದ್ರೆ ನಮಗೆ ಬಾಂಗ್ಲಾದೇಶದವ್ರದ್ದು ಎಂಬ ಅನುಮಾನವಿದ್ದು, ತನಿಖೆ ಮಾಡಲಾಗ್ತಿದೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ತ್ರಿಪುರದ ಆಧಾರ್ ಕಾರ್ಡ್ ಮತ್ತು ದಾಖಲೆ ಸಿಕ್ಕಿವೆ ಆದರೇ ಸಂಪೂರ್ಣ ತನಿಖೆ ಬಳಿಕ ಸ್ಪಷ್ಟತೆ ಸಿಗುತ್ತೆ ಆ ಬಗ್ಗೆ ತನಿಖೆ ಮಾಡ್ತಿದ್ದೇವೆ. ಬಾಂಗ್ಲಾ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಸಿಕ್ಕಿದೆ. ಪರಿಶೀಲನೆ ಮಾಡಲಾಗ್ತಿದೆ. ಎಂಟು ಮಂದಿ ಬಂಧನ ಮಾಡಲಾಗಿದ್ದು,ಇಬ್ಬರು ಮಹಿಳೆಯರು ಆರು ಮಂದಿ ಪುರುಷರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶರಣಪ್ಪ ತಿಳಿಸಿದ್ದಾರೆ.
Bengaluru crime: 8 arrested for running prostitution business by renting house…